2.8 ಕೋಟಿ ಮೌಲ್ಯದ ರಕ್ತ ಚಂದನ ವಶಪಡಿಸಿಕೊಂಡ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು
2.4 ಕೋಟಿ ಮೌಲ್ಯದ 4.8 ಟನ್ ರಕ್ತ ಚಂದನ ಮರದ ದಿಮ್ಮಿಗಳನ್ನು ತೈವಾನ್ಗೆ ಕಳ್ಳಸಾಗಣೆ ಮಾಡುತ್ತಿದ್ದಾಗ ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವೈಟ್ಫೀಲ್ಡ್ನಲ್ಲಿರುವ ಇನ್ಲ್ಯಾಂಡ್ ಕಾರ್ಗೋ ಡಿಪೋ (ಐಸಿಡಿ) ಯಲ್ಲಿ ಅಧಿಕಾರಿಗಳು ಅಫರಾಧಿಗಳನ್ನ ಬೇಟಿಯಾಡಿದ್ದಾರೆ.
ಪೀಠೋಪಕರಣಗಳನ್ನ ರಫ್ತು ಮಾಡಲಾಗುತ್ತಿದೆ ಎಂದು ಉಲ್ಲೆಖಿಸಿದ ಕಂಟೇನರ್ನೊಳಗೆ ರಕ್ತ ಚಂದನ ಕಳ್ಳಸಾಗಾಣೆಯನ್ನ ಮಾಡಲಾಗುತ್ತಿತ್ತು. ಅಧಿಕಾರಿಗಳನ್ನು ದಾರಿತಪ್ಪಿಸಲು ಮೇಲ್ಭಾಗದಲ್ಲಿ ಕೆಲವು ಪಿಠೋಪಕರಣಗಳನ್ನ ಹಾಕಿದ್ದರು. Smuggled red sanders worth 2.4 crore headed for Taiwan seized in Bengaluru
ಐಸಿಡಿ ಅಧಿಕಾರಿಗಳು ತಮಿಳುನಾಡಿನಿಂದ ಬಂದ ಕಂಟೇನರ್ ಪರಿಶೀಲಿಸುತ್ತಿದ್ದಾಗ ಪ್ಲೈವುಡ್ ಬಾಕ್ಸ್ಗಳ ಒಳಗೆ ಸೀಲ್ ಮಾಡಲಾದ ಸೋಫಾ ಸೆಟ್ಗಳು ಮತ್ತು ಡೈನಿಂಗ್ ಟೇಬಲ್ಗಳಂತಹ ಪೀಠೋಪಕರಣ ವಸ್ತುಗಳು ಮೇಲ್ಭಾಗದಲ್ಲಿ ಪತ್ತೆಯಾಗಿವೆ. ಆದರೆ, ಅಧಿಕಾರಿಗಳು ಅನುಮಾನಗೊಂಡು ಪೆಟ್ಟಿಗೆಗಳನ್ನ ಇಳಿಸಿದಾಗ. ರೆಡ್ ಸ್ಯಾಂಡಲ್ ಗಳನ್ನ ಪತ್ತೆ ಹಚ್ಚಿದ್ದಾರೆ. 65 ಬಾಕ್ಸ್ ಗಳಲ್ಲಿ ಒಟ್ಟು 195 ರೆಡ್ ಸ್ಯಾಂಡಲ್ ದಿಮ್ಮಿಗಳು ಕಂಡುಬಂದಿವೆ. ಕಂಟೈನರ್ಗಳನ್ನು ಬುಕ್ ಮಾಡಿದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.








