ಹಾವನ್ನ ಹೇರ್ಬ್ಯಾಂಡ್ ಆಗಿ ಬಳಸಿಕೊಂಡ ಮಹಿಳೆ snake saaksha tv
ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಹಾವಿನ ಜೊತೆ ಮಲಗುವುದು.
ಹಾವಿನನ್ನ ಅಪ್ಪಿತಪ್ಪಿಕೊಂಡು ಮುತ್ತುಕೊಡುವುದು ಹೀಗೆ ಚಿತ್ರ ವಿಚಿತ್ರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ.
ಅದರಂತೆ ಇದೀಗ ಒಬ್ಬ ಮಹಿಳೆ ಹಾವನ್ನ ತನ್ನ ಹೇರ್ ಬ್ಯಾಂಡ್ ಆಗಿ ಬಳಿಸಿಕೊಂಡಿದ್ದಾರೆ.
ಹೌದು..! ಮಹಿಳೆಯೊಬ್ಬರು ಹಾವನ್ನ ಹೇರ್ ಬ್ಯಾಂಡ್ ಆಗಿಸಿಕೊಂಡು ತಲೆಗೆ ಸುತ್ತಿಕೊಂಡು ಶಾಪಿಂಗ್ ಮಾಲ್ ಗೆ ಹೋಗಿದ್ದಾರೆ.
ನೋಡಿದ ತಕ್ಷಣ ಅದು ಹಾವೆಂದು ಯಾರಿಗೂ ಗೊತ್ತಾಗುವುದಿಲ್ಲ. ಕೊಂಚ ತೀಷ್ಣವಾಗಿ ಗಮನಿಸಿದ್ರೆ ಹಾವೆಂದು ಗೊತ್ತಾಗುತ್ತದೆ.
ಇನ್ನು ಮಹಿಳೆ ಹಾವನ್ನ ರೀತಿ ಹೇರ್ ಬ್ಯಾಂಡ್ ಆಗಿ ಮಾಡಿಕೊಂಡು ಶಾಪಿಂಗ್ ಮಾಡಿದ್ದಾರೆ.
ಇದನ್ನ ಅಲ್ಲಿದ್ದವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋವನ್ನ ನೋಡಿದ ನೆಟ್ಟಿಗರು ವಿಧ ವಿಧದ ಕಮೆಂಟ್ ಗಳನ್ನ ಮಾಡುತ್ತಿದ್ದಾರೆ.