10 ಹಾವು.. 2 ಚೇಳು.. ಅಂಗನವಾಡಿಯೋ..? ಹುತ್ತವೋ..?
ಹೈದರಾಬಾದ್ : ಅಂಗನವಾಡಿ ಕೇಂದ್ರದಲ್ಲಿ ಬರೋಬ್ಬರಿ 40 ಹಾವು, 2 ವಿಷಕಾರಿ ಚೇಳುಗಳು ಪತ್ತೆಯಾಗಿರುವ ಘಟನೆ ತೆಲಂಗಾಣದ ಮೆಹಬೂಬಾದ್ ಜಿಲ್ಲೆಯ ಕೋಟಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮೊದಲು ಅಂಗನವಾಡಿ ಶಿಕ್ಷಕಿಗೆ ಒಂದು ಹಾನಿನ ಮರಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಶಿಕ್ಷಕಿ ಆಚೆ ಓಡಿ ಬಂದು ಬಾಗಿಲು ಮುಚ್ಚಿ ಗ್ರಾಮಸ್ಥರನ್ನು ಕರೆದಿದ್ದಾರೆ.
ಬಳಿಕ ಗ್ರಾಮಸ್ಥರು ಹಾವು ಸೇರಿಕೊಂಡಿರುವ ಕಲ್ಲನ್ನ ತೆಗೆದಾಗ ಅಲ್ಲಿ ಬರೋಬ್ಬರಿ 40 ಹಾವಿನ ಮರಿಗಳು ಹಾಗೂ 2 ಚೇಳು ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಇನ್ನು ಈ ಅಂಗನವಾಡಿ ಕೇಂದ್ರ ಹಳೆಯದಾಗಿದ್ದು, ಕೂಡಲೇ ಹೊಸ ಅಂಗನವಾಡಿ ಕೇಂದ್ರವನ್ನ ಕಟ್ಟಿಸಿಕೊಡಬೇಕೆಂದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.