ಹಾವುಗಳ ಕಾಟಕ್ಕೆ 13 ಕೋಟಿ ರೂ. ಮೌಲ್ಯದ ಮನೆಗೆ ಬೆಂಕಿ ಇಟ್ಟರು..!
ಅಮೆರಿಕಾ : ಹಾವುಗಳ ಕಾಟದಿಂದ ಮುಕ್ತರಾಗಲು ಹೋದವರು 13 ಕೋಟಿ ರೂಪಾಯಿ ಮೌಲ್ಯದ ಮನೆಯನ್ನೇ ಕಳೆದುಕೊಂಡಿರುವ ಘಟನೆ ಅಮೆರಿಕಾದ ಮೇರಿಲ್ಯಾಂಡ್ ನಲ್ಲಿ ನಡೆದಿದೆ. ಬಂಗಲೆಗೆ ಬರುತ್ತಿದ್ದ ಹಾವುಗಳ ಕಾಟದಿಂದ ರೋಸಿ ಹೋಗಿದ್ದ ಮನೆ ಮಾಲೀಕ ಮಾಡಿದ್ದ ಪ್ಲಾನ್ ನಿಂದ ಈ ರೀತಿಯಾದ ಎಡವಟ್ಟು ಆಗಿದೆ..
13.50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದ ಮನೆಗೆ ಬೆಂಕಿ ಬಿದ್ದು ಸುಟ್ಟು ಕರಕಲಾಗಿದೆ.. ಮನೆ ಖರೀದಿ ಮಾಡಿ ಅಲ್ಲಿಗೆ ಬಂದ ನಂತರ , ಅಲ್ಲಿ ನಿತ್ಯ ಮನೆಯೊಳಗೆ ಎಲ್ಲಿ ನೋಡಿದ್ರು ಹಾವುಗಳೇ ಕಾಣಿಸತೊಡಗಿದೆ.. ಇದರಿಂದ ರೋಸಿ ಹೋಗಿ ಕಲ್ಲಿದ್ದಲು ತಂದು ಅದಕ್ಕೆ ಬೆಂಕಿ ಕೊಟ್ಟಿದ್ದಾನೆ. ಹೊಗೆಯಿಂದ ಹೋವುಗಳು ಹೊರಟು ಹೋಗ್ತವೆ ಅಂದುಕೊಂಡಿದ್ದವನು ಈಗ ಮನೆಯನ್ನೇ ಕಳೆದುಕೊಂಡಿದ್ದಾನೆ..
ಕಲ್ಲಿದ್ದಲಿಗೆ ಹಾಕಿದ್ದ ಬೆಂಕಿ ಮನೆಯಲ್ಲಿದ್ದ ಪೀಠೋಪಕರಣಗಳಿಗೆ ವ್ಯಾಪಿಸಿದೆ.. ಕೆಲವೇ ಕ್ಷಣಗಳಲ್ಲಿ 10 ಸಾವಿರ ಚದರ ಅಡಿ ವಿಸ್ತೀರ್ಣದ ಇಡೀ ಬಂಗಲೆ ಸುಟ್ಟು ಕರಕಲಾಗಿದೆ. ಈ ಸಂಬಂಧಿತ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ…
https://twitter.com/i/status/1464239010176450561








