ತನ್ನ ಲೋಗೋ ಲೋಗೋ ಬದಲಾಯಿಸಿದ ‘ರೈಸಿಂಗ್ ಸ್ಟಾರ್’ ಕೂ ಆಪ್
ದೇಶೀಯ ಅದ್ರಲ್ಲೂ ಕನ್ನಡಿಗರು ರೂಪಿಸಿರುವ ಸಾಮಾಜಿಕ ಜಾಲತಾಣ ಆಪ್ ಆಗಿರುವ ‘ಕೂ’ ಇತ್ತೀಚಿನ ದಿನಗಳಲ್ಲಿಹೆಚ್ಚು ಹೆಚ್ಚು ಪ್ರಸಿದ್ಧಿ ಪಡೆದುಕೊಳ್ತಿದೆ. ಅದ್ರಲ್ಲೂ ವಾಟ್ಸಪ್ ನಲ್ಲಿ ಹೊಸ ನೀತಿಯ ಬೆನ್ನಲ್ಲೇ ಖಾಸಗಿ ಮಾಹಿತಿ ಸೋರಿಕೆ ಭೀತಿಯಲ್ಲಿ ಬಳಕೆದಾರರು ವಾಟ್ಸಾಪ್ ತೊರೆಯುತ್ತಿದ್ದಾರೆ.. ಹೀಗೆ ವಾಟ್ಸಾಪ್ ಮೇಲೆ ಬಳಕೆದಾರರಿಗೆ ನಂಬಿಕೆ ಕಡಿಮೆಯಾಗುವ ಜೊತೆಗೆ ಬೇರೆ ಬೇರೆ ಆಪ್ ಗಳ ಬಗ್ಗೆ ಒಲವು ಹೆಚ್ಚಾಗಿದೆ. ಇಂತಹ ಆಪ್ ಗಳ ಪೈಕಿ ‘ಕೂ’ ಕೂಡ ಒಂದು. ಇದೀಗ ‘ಕೂ’ ಆಪ್ ತನ್ನ ಲೋಗೋವನ್ನ ಬದಲಾಯಿಸಿದೆ.
ಬೆಂಗಳೂರು ಮೂಲದ ‘ಕೂ’ ಆಯಪ್ ತನ್ನ ಲೋಗೊವನ್ನು ಬದವಾಣೆ ಮಾಡಿದದೆ. ಹಳೆಯ ಲೋಗೋಗೆ ಹೋಲಿಕೆ ಮಾಡಿದ್ರೆ ದೊಡ್ಡ ಮಟ್ಟದಲ್ಲೇನೂ ಬದಲಾವಣೆಯಾಗಿಲ್ಲ. ಇನ್ನೂ ಲೊಗೊ ಉದ್ಘಾಟಿಸಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ರವಿಶಂಕರ್, ಸಾಮಾಜಿಕ ಸಂಪರ್ಕ ಮತ್ತು ಮಾಹಿತಿ ಹರಿವು ಸುಸಂಸ್ಕೃತ ಸಮಾಜದ ಚಿಹ್ನೆಗಳಲ್ಲಿ ಒಂದಾಗಿದೆ. ಕೂ ಆಯಪ್ ದೇಶ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಸುಲಭದಲ್ಲಿ ಸಂಪರ್ಕಿಸುತ್ತಿದೆ ಎಂದು ಹೇಳಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.