ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ದಲಿತರಿಗೆ (Dalits) ಅನ್ಯ ಕೋಮಿನ ಕುಟುಂಬವನ್ನು ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಸಿಎಂ ಹುಟ್ಟೂರು ಸಿದ್ದರಾಮನ ಹುಂಡಿ ಗ್ರಾಮದಿಂದ ಕೂಗಳತೆ ದೂರದಲ್ಲಿನ ಶ್ರೀನಿವಾಸಪುರದಲ್ಲಿ (Srinivaspur) ಈ ಘಟನೆ ನಡೆದಿದೆ. ಅದೇ ಕೋಮಿನ ಜನರು ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ.
ಶ್ರೀನಿವಾಸಪುರ ಗ್ರಾಮದಲ್ಲಿ ಮಾದಿಗ ಸಮುದಾಯದ ಜನ ಹೆಚ್ಚಾಗಿದ್ದಾರೆ. ಅದೇ ಗ್ರಾಮದ ಸುರೇಶ್ ಎಂಬುವವರ ಕುಟುಂಬಕ್ಕೆ ಕಳೆದ ನಾಲ್ಕು ವರ್ಷಗಳಿಂದ ಮಾದಿಗ ಸಮುದಾಯದ ಜನರು ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಸುರೇಶ್ ಗೆ ಗ್ರಾಮದ ಹಿರಿಯರು 15 ಸಾವಿರ ರೂದ ದಂಡ ಹಾಕಿದ್ದರು. ಆದರೆ, ಸುರೇಶ್ ದಂಡ ಕಟ್ಟಿರಲಿಲ್ಲ. ಹೀಗಾಗಿ ಹಿರಿಯರು ಬಹಿಷ್ಕಾರ ಹಾಕಿದ್ದಾರೆ ಎ ನ್ನಲಾಗಿದೆ.
ಊರಿನ ದೇವಸ್ಥಾನಕ್ಕೆ ಈ ಕುಟುಂಬಕ್ಕೆ ಪ್ರವೇಶವಿಲ್ಲ. ಊರ ದೇವರ ಮೆರವಣಿಗೆ ವೇಳೆ ದೇವರ ಉತ್ಸವ ಇವರ ಮನೆ ಮುಂದೆ ನಿಲ್ಲುವಂತಿಲ್ಲ. ಗ್ರಾಮದಲ್ಲಿ ಯಾರೂ ಈ ಕುಟುಂಬದವರನ್ನು ಮಾತನಾಡಿಸುವಂತಿಲ್ಲ. ಕೂಲಿಗೆ ಕರೆಯುವಂತಿಲ್ಲ. ಮನೆಯಲ್ಲಿ ಯಾರಾದರೂ ಸತ್ತರೆ ಹೆಣ ಹೊರಲು ಯಾರೂ ಹೋಗುವಂತಿಲ್ಲ ಸೇರಿದಂತೆ ಹಲವು ವಿಷಯಗಳಲ್ಲಿ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ.
ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಯಾದ ರಾಜಕೀಯ ಶಾಶ್ವತವಲ್ಲ, ಯಾರಪ್ಪನ ಆಸ್ತಿನೂ ಅಲ್ಲ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ - ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ....







