Tamil Nadu : DMK ಕೌನ್ಸಿಲರ್ ಬೆಂಬಲಿಗರಿಂದ ಹಲ್ಲೆ; ಯೋಧ ಸಾವು…
ಸಾರ್ವಜನಿಕ ಟ್ಯಾಂಕೊಂದರಲ್ಲಿ ಬಟ್ಟೆ ತೊಳಿಯುವ ಕಾರಣಕ್ಕೆ ವಿಚಾರವಾಗಿ ನಡೆದ ಜಗಳದಲ್ಲಿ ಡಿಎಂಕೆ ಕೌನ್ಸಿಲರ್ ನೇತೃತ್ವದ ಗುಂಪೊಂದು ಹಲ್ಲೆ ಮಾಡಿದ್ದರಿಂದ 29 ವರ್ಷ ವಯಸ್ಸಿನ ಯೋಧರೊಬ್ಬರು ಮೃತಪಟ್ಟ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ಫೆಬ್ರವರಿ 8ರಂದು ಘಟನೆ ನಡೆದಿದೆ. ಮೃತ ಯೋಧ ಪ್ರಭು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕ ಟ್ಯಾಂಕೊಂದರ ಬಳಿ ಬಟ್ಟೆ ತೊಳೆಯುತ್ತಿದ್ದ ವಿಚಾರವಾಗಿ ಯೋಧ ಮತ್ತು ಕೌನ್ಸಿಲರ್ ಚಿನ್ನಸ್ವಾಮಿ ನಡುವೆ ಜಗಳವಾಗಿ, ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಯೋಧ ಪ್ರಭು ಅವರ ಸಹೋದರ ಪ್ರಭಾಕರನ್ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಎಂಕೆ ಕೌನ್ಸಿಲರ್ ಮತ್ತು ಅವರ ಜತೆಗಿದ್ದ ಗುಂಪು ಸೈನಿಕ ಹಾಗೂ ಅವರ ಸಹೋದರನ ಮೇಲೆ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ ಪ್ರಭು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಡಿಎಂಕೆ ಕೌನ್ಸಿಲರ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಡಿಎಂಕೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
Soldier Dies Days After Attack By Mob Led By DMK Councillor In Tamil Nadu