ರಾಜಕೀಯ ಜೀವನದಲ್ಲಿ ಸಣ್ಣ ಮಟ್ಟದ ವಿವಾದಗಳು ಮತ್ತು ಆಕಸ್ಮಿಕ ಅವಘಡಗಳು ಸಾಮಾನ್ಯವೇ, ಆದರೆ ಕೆಲವೊಮ್ಮೆ ಇವು ದೊಡ್ಡ ಮಟ್ಟದ ರಾಜಕೀಯ ಸಂಚಲನವನ್ನು ಉಂಟುಮಾಡಬಹುದು.
ಇತ್ತೀಚೆಗೆ ನಡೆದ ರಾಜಕೀಯ ಘಟನೆಯಲ್ಲಿ, ಮುಡಾ ವಿವಾದದ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ಪ್ರೀತಿಯಿಂದ ಒಂದು ಸಲಹೆ ನೀಡಿದ್ದಾರೆ. ನಾನು ಹೇಳಿದಾಗಲೇ ಆ ಸೈಟ್ ಅನ್ನು ಅಂದೇ ವಾಪಸ್ ಕೊಟ್ಟಿದ್ದರೆ, ಇಷ್ಟೆಲ್ಲಾ ಆಗ್ತಿರಲಿಲ್ಲ.ಇದರಿಂದ ಈ ವಿವಾದವನ್ನು ಮೊದಲೇ ತಪ್ಪಿಸಬಹುದಿತ್ತೆಂದು ವಿ. ಸೋಮಣ್ಣ, ಸಿಎಂಗೆ ಹೇಳಿದ್ದಾರೆ.
ಈ ಸಲಹೆಗೆ ತಕ್ಷಣ ಸಿದ್ದರಾಮಯ್ಯ ಅವರು ತಮ್ಮ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಏಯ್, ಗೊತ್ತಿಲ್ಲದೆ ಏನೆಲ್ಲಾ ಮಾತನಾಡ್ತೀಯಾ? ಎಂದು ಗದರಿದ ಸಿದ್ದರಾಮಯ್ಯ, ನನ್ನ ಮಾತು ಕೇಳು ಎಂದು ಪ್ರಕರಣದ ಬಗ್ಗೆ ಸೋಮಣ್ಣ ಅವರಿಗೆ ಸಮಜಾಯಿಷಿ ನೀಡಿದ್ದಾರೆ.. ಸಿದ್ದರಾಮಯ್ಯ ಅವರು ವಿವಾದಕ್ಕೆ ಸಂಬಂಧಿಸಿದಂತೆ, ತಮ್ಮ ದೃಷ್ಟಿಕೋನವನ್ನು ವಿವರಿಸಿದ್ದಾರೆ.
ರಾಜಾರಾಮ ಮೋಹನ್ ರಾಯ್ ರಸ್ತೆಯಲ್ಲಿರುವ ರಮಣಶ್ರೀ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕವಾಗಿ ಉಭಯ ನಾಯಕರು ಭೇಟಿಯಾಗಿದ್ದು, ಇಬ್ಬರೂ ತಮ್ಮ ವೈಯಕ್ತಿಕ ವಿಷಯಗಳನ್ನು ಚರ್ಚಿಸಿ ಪರಸ್ಪರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.