ಕೊರೊನಾ ಮುಕ್ತ ಮೈಸೂರಿಗಾಗಿ ರಾಜೀನಾಮೆ ನೀಡಲು ಸಿದ್ಧ : ಸೋಮಶೇಖರ್
ಮೈಸೂರು : ಕೊರೊನಾ ಮುಕ್ತ ಮೈಸೂರಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ವರ್ಸಸ್ ಶಿಲ್ಪಾನಾಗ್ ಜಟಾಪಟಿ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ ಟಿ ಸೋಮಶೇಖರ್, ಕೊರೊನಾ ಮುಕ್ತ ಮೈಸೂರಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧನಿದೇನೆ. ಮೈಸೂರಿನ ಗೊಂದಲಕ್ಕೆ ನಾನು ಕಾರಣಕರ್ತನಲ್ಲ. ನನ್ನನ್ನ ಟೀಕಿಸಲು ಕಾಂಗ್ರೆಸ್‍ಗೆ ನೈತಿಕತೆ ಇಲ್ಲ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ನಾಯಕರಿಗೆ ಖುಷಿ ಆಗುತ್ತೆ ಅಂದ್ರೆ, ನನ್ನ ರಾಜೀನಾಮೆಯಿಂದ ಕೊರೊನಾ ಕಂಟ್ರೋಲ್ ಆಗುತ್ತೆ ಅಂದ್ರೆ ರಾಜೀನಾಮೆ ನೀಡ್ತೀನಿ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.
ಇದೇ ವೇಳೆ ರೋಹಿಣಿ ಸಿಂಧೂರಿ ವರ್ಗಾವಣೆಗೆ ಪರೋಕ್ಷ ಒತ್ತಾಯಿಸಿದ ಎಸ್ ಟಿ ಸೋಮಶೇಖರ್, ಮೈಸೂರು ಬೆಳವಣಿಗೆ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ.
ಗೊಂದಲಕ್ಕೆ ಇತಿಶ್ರಿ ಹಾಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.
ಸಿಎಂ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲೇ ಸಿಎಂ ಏನು ಕ್ರಮ ಕೈಗೊಳ್ತಾರೆ ಅಂತ ಗೊತ್ತಾಗಲಿದೆ ಎಂದರು.









