ಬಿಜೆಪಿಯಲ್ಲಿ ಬಾಂಬೆ ಟೀಂ, ಹಳೆ ಟೀಂ, ಹೊಸ ಟೀಂ ಇಲ್ಲ ; ಸೋಮಶೇಖರ್
ಮೈಸೂರು : ರಾಜ್ಯ ಬಿಜೆಪಿಯಲ್ಲಿ ಯಾವುದೇ ಟೀಂ ಇಲ್ಲ. ನಾವೆಲ್ಲರೂ ಒಂದೇ ಬಿಜೆಪಿ ಟೀಂ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ವಲಸೆ ಬಿಜೆಪಿ ನಾಯಕರ ವಿರುದ್ಧ ಮೂಲ ಬಿಜೆಪಿಗರು ಮುನಿಸಿಕೊಂಡಿದ್ದಾರೆ.
ಯಡಿಯೂರಪ್ಪನವರು ವಲಸೆ ನಾಯಕರಿಗೆ ಹೆಚ್ಚು ಮಣೆ ಹಾಕುತ್ತಿದ್ದಾರೆ.
ರಾಜ್ಯ ಭಾಜಾಪಾದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂಬ ಮಾತುಗಳ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಈ ಬಗ್ಗೆ ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಬಿಜೆಪಿಯಲ್ಲಿ ಯಾವುದೇ ಟೀಂ ಇಲ್ಲ.
ಬಾಂಬೆ ಟೀಂ, ಹಳೆ ಟೀಂ, ಹೊಸ ಟೀಂ ಎಂದೆಲ್ಲ ಇಲ್ಲ. ನಾವೆಲ್ಲರೂ ಒಂದೇ ಬಿಜೆಪಿ ಟೀಂ.
ಚಾಮರಾಜನಗರ : ಬಿಎಸ್ ವೈ ವಿರುದ್ಧ ಗೋಬ್ಯಾಕ್ ಸಿಎಂ ಅಭಿಯಾನ
ಒಂದಿಬ್ಬರು ಮಾತನಾಡಿದರೆ ಇಡೀ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇದೆ ಎಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮಾಜಿ ಸಚಿವ ರೋಷನ್ ಬೇಗ್ ಬಂಧನದ ಬಗ್ಗೆ ಮಾತನಾಡಿ, ರೋಷನ್ ಬೇಗ್ ಅವರು ಬಿಜೆಪಿಯನ್ನು ನಂಬಿ ಕಾಂಗ್ರೆಸ್ ಬಿಟ್ಟು ಬಂದಿಲ್ಲ.
ಕಾಂಗ್ರೆಸ್ ಪಕ್ಷದ ಒಳರಾಜಕೀಯದಿಂದ ಬೇಸತ್ತು ಹೊರಬಂದಿದ್ದಾರೆ. ಅವರನ್ನು ಐಎಂಎ ಪ್ರಕರಣದಲ್ಲಿ ವಿಚಾರಣೆಗೆ ಕರೆದೊಯ್ದಿದ್ದಾರೆ.
ಅವರು ಏನೂ ತಪ್ಪು ಮಾಡಿಲ್ಲ ಎಂದಾದರೆ, ಹೊರಗಡೆ ಬರುತ್ತಾರೆ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel