ನವದೆಹಲಿ: ಕೊರೊನಾದಿಂದ ದೇಶವನ್ನು ರಕ್ಷಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕಠಿಣ ನಿಲುವುಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಏಪ್ರಿಲ್ 14ರ ಬಳಿಕ ಲಾಕ್‌ಡೌನ್ ವಿಸ್ತರಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರ ಮಧ್ಯೆ ತಮ್ಮ ವಿರುದ್ಧ ಅನವಶ್ಯಕ ವಿವಾದಗಳನ್ನು ಸೃಷ್ಟಿಸುತ್ತಿರುವವರಿಗೆ ಮೋದಿ ಟ್ವಿಟ್ಟರ್ ನಲ್ಲಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಮೋದಿ ಟ್ವೀಟ್ ನಲ್ಲಿ ಏನಿದೆ?

“ನಾನು ತೆಗೆದುಕೊಳ್ಳುವ ನಿಲುವುಗಳಿಗೆ ಗೌರವ ಸೂಚಿಸಲು 5 ನಿಮಿಷಗಳ ಕಾಲ ಅವರಿಗೆ ಗೌರವ ಸೂಚಿಸಿ ಎಂಬ ಅಭಿಯಾನವನ್ನು ಕೆಲ ವ್ಯಕ್ತಿಗಳು ಆರಂಭಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಮೇಲ್ನೋಟಕ್ಕೆ ಇದು ನನ್ನನ್ನು ವಿವಾದಕ್ಕೆ ಸಿಲುಕಿಸಲು ಮಾಡುತ್ತಿರುವ ಕಿಡಿಗೇಡಿತನದಂತೆ ಕಾಣುತ್ತಿದೆ” ಎಂದು ಮೋದಿ ಕಿಡಿಕಾರಿದ್ದಾರೆ.
“ಬಡ ಕುಟುಂಬವೊಂದರ ಜವಾಬ್ದಾರಿ ತೆಗೆದುಕೊಳ್ಳಿ”
“ಯಾರಾದರೂ ನನ್ನ ಮೇಲೆ ನಿಜವಾಗಿಯೂ ಅಭಿಮಾನ ಹೊಂದಿದ್ದರೆ, ನಾನು ನಿಮಗೆ ತುಂಬಾ ಪ್ರೀತಿಯ ವ್ಯಕ್ತಿ ಎನಿಸಿದ್ದರೆ, ಮೋದಿಯನ್ನು ಗೌರವಿಸಲು ಬಯಸಿದರೆ, ಕೊರಾನಾ ಬಿಕ್ಕಟ್ಟು ಮುಗಿಯುವವರೆಗೆ ಬಡ ಕುಟುಂಬವೊಂದರ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಇದಕ್ಕಿಂತ ದೊಡ್ಡ ಗೌರವ ನನಗೆ ಇನ್ನೊಂದಿಲ್ಲ ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ.








