ಕೆಲವರಿಗೆ ಕೊರೊನಾ ಲಸಿಕೆ ಸಿಗಲ್ಲ : ಯಾಕೆ ಗೊತ್ತಾ?
ಬೆಂಗಳೂರು : ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಶೇ.110ರಷ್ಟು ಸೇಫ್ ಆಗಿರುವ ಹಿನ್ನೆಲೆಯಲ್ಲಿ ಕೊರೊನಾ ವಿರುದ್ಧ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿದೇಶನಾಲಯ ಅಧಿಕೃತ ಅನುಮೋದನೆ ನೀಡಿದೆ. ಲಸಿಕೆಯನ್ನು ಹಂತ ಹಂತವಾಗಿ ವಿತರಣೆ ಮಾಡಲಾಗುತ್ತದೆ.
ಈ ಲಸಿಕೆಯಿಂದ ಅಡ್ಡ ಪರಿಣಾಮಗಳು ಆಗೋದಿಲ್ಲ. ಆದ್ರೆ ಲಸಿಕೆ ತೆಗೆದುಕೊಂಡ ಕೆಲವರಲ್ಲಿ ಸಣ್ಣ ಜ್ವರ, ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ,ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಸಿಜಿಐ ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗೆ ಅನುಮತಿ ನೀಡಿದ್ದನ್ನ ಸ್ವಾಗತಿಸಿದರು. ಲಸಿಕೆ ಬಂದ ಬಳಿಕ ಹಂತ ಹಂತವಾಗಿ ವಿತರಣೆ ಮಾಡೋದಾಗಿ ತಿಳಿಸಿದರು.
ಇನ್ನು ನಮ್ಮ ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಡ್ರೈ ರನ್ ಕೂಡ ಯಶಸ್ವಿಯಾಗಿ ನಡೆದಿದ್ದು, ಲಸಿಕೆ ಪೂರೈಕೆಯಾಗುತ್ತಿದ್ದಂತೆ ಹಂತ ಹಂತವಾಗಿ ಲಸಿಕೆ ವಿತರಣೆ ಮಾಡಲಾಗುತ್ತೆ.
ಬಿಜೆಪಿಯಿಂದ ಮೈತ್ರಿಯ ಕಪಟ ನಾಟಕ : ಹೆಚ್.ಡಿ.ಕುಮಾರಸ್ವಾಮಿ
ಲಸಿಕೆ ಕೊಟ್ಟ ಮೇಲೆ ನಿಗಾ ಇಡಬೇಕಾಗಿದೆ. ಹಾಗಾಗಿ ಒಂದು ಲಸಿಕಾ ಕೇಂದ್ರದಲ್ಲಿ ನೂರು ಜನರಂತೆ ವಿಂಗಡಿಸಿ ಲಸಿಕೆ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಲಸಿಕೆಗಳಿಂದ ಅಡ್ಡ ಪರಿಣಾಮಗಳೇನಾದರೂ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಲಸಿಕೆಯಿಂದ ಅಡ್ಡ ಪರಿಣಾಮಗಳು ಆಗೋದಿಲ್ಲ. ಆದ್ರೆ ಕೆಲವರಲ್ಲಿ ಸಣ್ಣಜ್ವರ, ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಅಲರ್ಜಿ ಸಮಸ್ಯೆ ಇರುವವರಿಗೆ ಲಸಿಕೆ ಕೊಟ್ಟರೆ ಜಾಸ್ತಿ ನಿಗಾ ಇರಿಸಬೇಕಾಗಿದೆ. ಸದ್ಯ 18 ವರ್ಷ ಮೆಲ್ಪಟ್ಟವರಿಗೆ ಲಸಿಕೆ ಕೊಡಲಾಗುತ್ತಿದೆ. ಬಾಣಂತಿಯರು ಗರ್ಭಿಣಿಯರು ಮತ್ತು ಮಕ್ಕಳಿಕೆ ಲಸಿಕೆ ಕೊಡುವುದಿಲ್ಲ.
ಯಾಕೆಂದ್ರೆ ಮಕ್ಕಳು ಬಾಣಂತಿಯರು ಮತ್ತು ಗರ್ಭಿಣಿಯರ ಮೇಲೆ ಲಸಿಕೆ ಪ್ರಯೋಗ ಮಾಡಿಲ್ಲ. ಹೀಗಾಗಿ ಲಸಿಕೆ ಬಂದರೂ ನೀಡಲ್ಲ. ಇವರ ಮೇಲೆ ಪ್ರಯೋಗ ಮಾಡಿದ ಬಳಿಕ ಹಂತ ಹಂತವಾಗಿ ಲಸಿಕೆ ಕೊಡಲಾಗುತ್ತದೆ ಎಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









