ರಾಯಚೂರು: ವಿದ್ಯುತ್ ತಂತಿ ಬದಲಾಯಿಸುವಾಗ ಕರೆಂಟ್ ಶಾಕ್ ಹೊಡೆದು ತಂದೆ ಹಾಗೂ ಮಗ ಸಾವನಪ್ಪಿರುವ ಘಟನೆ ರಾಯಚೂರು ತಾಲ್ಲೂಕಿನ ದಿನ್ನಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಬಾರೀ ಮಳೆಯಾದ ಪರಿಣಾಮ ಮನೆಯ ಮೇಲೆ ಇದ್ದ ವಿದ್ಯುತ್ ತಂತಿಗಳು ಸುಟ್ಟುಹೋಗಿದ್ದವು. ಇದನ್ನು ಬದಲಾಯಿಸಲು ಹೋದ ಸಂದರ್ಭದಲ್ಲಿ ತಂತಿ ಹಿಡಿದ ಪರಿಣಾಮ ವಿದ್ಯುತ್ ಸ್ಪರ್ಷವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
16 ವರ್ಷದ ನವೀನ್ ಹಾಗೂ 47 ಮಹೇಶ್ ಮೃತದುರ್ದೈವಿಗಳಾಗಿದ್ದಾರೆ. ಮೊದಲಿಗೆ ತಂದೆಗೆ ಶಾಕ್ ಹೊಡೆದಿದ್ದು, ಬಳಿಕ ತಂದೆಯನ್ನು ಉಳಿಸುವ ಪ್ರಯತ್ನದಲ್ಲಿ ಪುತ್ರ ನವೀನ್ ಸಹ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.









