ಬಳ್ಳಾರಿ : ತಂದೆ ಮತ್ತು ಮಗ ಇಬ್ಬರಿಗೂ ಒಂದೇ ದಿನ ಕೊರೊನಾ ಪಾಸಿಟಿವ್ ಬಂದಿತ್ತು. ಇದೀಗ ಇಬ್ಬರೂ ಒಂದೇ ದಿನ ಡಿಸ್ಚಾರ್ಜ್ ಆಗಿರುವ ಪ್ರಕರಣ ಬಳ್ಳಾರಿಯ ಸಿರುಗುಪ್ಪ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. 99 ವರ್ಷದ ಅಚ್ಯತ್ ರಾವ್ ಹಾಗೂ 67 ವರ್ಷದ ಮಗ ರಂಗಾರಾವ್ ಇಬ್ಬರಿಗೂ ಸೆಪ್ಟೆಂಬರ್ 1ರಂದು ಸೋಂಕು ಧೃಡಪಟ್ಟಿತ್ತು. ಬಳ್ಳಾರಿಯ ಟ್ರಾಮಕೇರ್ ಸೆಂಟರದ ನಲ್ಲಿ ಇಬ್ಬರಿಗೂ ಚಿಕಿತ್ಸೆ ನಿಡಲಾಗ್ತಿತ್ತು.
ಇದೀಗ ಇಬ್ಬರೂ ಏಕಕಾಲದಲ್ಲಿ ಗುಣಮುಖರಾಗಿ ಒಂದೇ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆಗಳ ಮೂಲಕ ತಂದೆ ಮತ್ತು ಮಗನನ್ನು ಸಂತಸದಿಂದ ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ.
https://youtu.be/BiO5BzHk1Oc?list=UUJKHM6z4CpcN_F-SuK2wPDw