Son Kills Father : ತಂದೆಯನ್ನೇ ವಿಮೆ ಹಣಕ್ಕಾಗಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪಾಪಿ ಮಗ..
ತಂದೆ ಹೆಸರಿಲ್ಲದ್ದ ವಿಮೆ ಹಣ ಪಡೆಯೋದಕ್ಕಾಗಿ ನೀಚ ಮಗನೊಬ್ಬ ಸುಪಾರಿ ಕೊಟ್ಟು ಸ್ವಂತ ಅಪ್ಪನನ್ನೇ ಕೊಲೆ ಮಾಡಿಸಿರುವ ಘಟನೆ ಮಧ್ಯಪ್ರದೇಶದ ಬರ್ವಾನಿಯಲ್ಲಿ ನಡೆದಿದೆ.
ನವೆಂಬರ್ 10 ರಂದು ತನ್ನ 52 ವರ್ಷದ ತಂದೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಸೆಂಧ್ವಾ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾನೆ.
ನಂತರ ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಇದೊಂದು ಕೊಲೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು.. ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ವ್ಯಕ್ತಿಗೆ ಡಿಕ್ಕಿ ಹೊಡೆದ ವಾಹನ ಕೆಲವು ಸಮಯದಿಂದಲೂ ಒಂದೇ ಸ್ಥಳದಲ್ಲಿ ಸುತ್ತಾಡಿರುವುದು ಕಂಡು ಬಂದಿದೆ.
ಮೃತ ವ್ಯಕ್ತಿ ಪ್ರತಿದಿನ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದರು. ಅದೇ ರೀತಿ ನವೆಂಬರ್ 10 ರಂದು ತನ್ನ ತಂದೆ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾರೆ ಎಂದು ಆರೋಪಿ ಸುಪಾರಿ ಕಿಲ್ಲರ್ ಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ… ನಂತರ ವಾಹನದಿಂದ ಡಿಕ್ಕಿ ಹೊಡೆದು ತಂದೆಯನ್ನ ಕೊಲೆ ಮಾಡಲಾಗಿದೆ..
ಈ ಬಗ್ಗೆ ಸೆಂಧ್ವಾ ಪೊಲೀಸ್ ಠಾಣೆಯ ಉಸ್ತುವಾರಿ ರಾಜೇಶ್ ಯಾದವ್ ಹೇಳಿದ್ದಾರೆ..
ಘಟನೆ ಬಳಿಕ ಪುಣೆಯಲ್ಲಿ ಕರಣ್ ಶಿಂಧೆ ಎಂಬ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ವ್ಯಕ್ತಿಯ ಮಗನೇ ತಂದೆಯನ್ನು ಕೊಲೆ ಮಾಡಲು 2.5 ಲಕ್ಷ ರೂಪಾಯಿ ಸುಪಾರಿ ನೀಡಿರುವ ಆಘಾತಕಾರಿ ವಿಚಾರ ಬಾಯ್ಬಿಟ್ಟಿದ್ದಾನೆ.
ನಂತರ ಮಗನನ್ನು ವಿಚಾರಣೆ ನಡೆಸಿದಾಗ ತನ್ನ ತಂದೆಯ ಹೆಸರಿನಲ್ಲಿ 10 ಲಕ್ಷ ರೂಪಾಯಿ ಅಪಘಾತ ವಿಮೆ ಮಾಡಿಸಲಾಗಿದ್ದು, ಹಣಕ್ಕಾಗಿ ತಂದೆಯನ್ನು ಕೊಲ್ಲಲು ಹಂತಕರಿಗೆ ಸುಪಾರಿ ಕೊಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.