ನಟ ಉಪೇಂದ್ರ (Upendra) ಅಣ್ಣನ ಮಗ ನಿರಂಜನ್ ಸುಧೀಂದ್ರಗೆ (Niranjan Sudhendra) ಅರ್ಜುನ್ ಸರ್ಜಾ (Arjun Sarja) ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಸೀತಾ ಪಯಣ’ ಎಂಬ ಹೆಸರಿಡಲಾಗಿದೆ.
ಈ ಸಿನಿಮಾದ ನಿರಂಜನ್ ಪಾತ್ರದ ಲುಕ್ ಅನ್ನು ಅನಾವರಣ ಮಾಡಲಾಗಿದೆ. ಸೀತಾ ಪಯಣ’ (Seetha Payana) ಚಿತ್ರದಲ್ಲಿ ನಿರಂಜನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಪಾತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಇನ್ನೂ ಐಶ್ವರ್ಯಾ ಸರ್ಜಾ ಮತ್ತು ನಿರಂಜನ್ ಜೋಡಿಯಾಗಿ ‘ಸೀತಾ ಪಯಣ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರದ ಟೈಟಲ್ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಪ್ರೀತಿಯನ್ನು ಸುತ್ತುವರೆದಿರುವ ಚಿತ್ರ ಎನ್ನಲಾಗಿದೆ.
ಪ್ರೇಮ ಬರಹ’ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಡೈರೆಕ್ಷನ್ ಮಾಡಿರುವ ಅರ್ಜುನ್ ಸರ್ಜಾ ಈ ಬಾರಿ ವಿಭಿನ್ನವಾಗಿರುವ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ನಿರಂಜನ್ ಸುಧೀಂದ್ರ, ಪುತ್ರಿ ಐಶ್ವರ್ಯಾ ಸರ್ಜಾ ಈ ಇಬ್ಬರನ್ನು ಜೋಡಿಯಾಗಿ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ನಿರಂಜನ್ ಈಗಾಗಲೇ ಸೆಕೆಂಡ್ ಹಾಫ್, ನಮ್ಮ ಹುಡುಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸೂಪರ್ ಸ್ಟಾರ್, ಹಂಟರ್, ಸೀತಾ ಪಯಣ ಸೇರಿದಂತೆ ಕೆಲವು ಚಿತ್ರಗಳೂ ಅವರ ಕೈಯಲ್ಲಿವೆ.