Tirupati | ತಾಯಿ ಶವದೊಂದಿಗೆ 4 ದಿನ ಕಳೆದ ಬಾಲಕ!
ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದ ಘಟನೆ
ಗಂಡನ ಬಿಟ್ಟು ಮಗನೊಂದಿಗೆ ಇದ್ದ ರಾಜಲಕ್ಷ್ಮಿ
ತಾಯಿಯ ಶವದೊಂದಿಗೆ ಇದ್ದ 10ರ ಬಾಲಕ
ಮಾರ್ಚ್ 8 ರಂದು ಮಲಗಿದ್ದ ರಾಜಲಕ್ಷ್ಮಿ
ಅಮರಾವತಿ: ತಾಯಿ ಮೃತಪಟ್ಟಿರುವ ವಿಷಯ ತಿಳಿಯದೇ 10 ವರ್ಷದ ಬಾಲಕ ತಾಯಿಯ ಹೆಣದೊಂದಿಗೆ ಕಾಲ ಕಳೆದ ಘಟನೆ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ತಾಯಿ ರಾಜಲಕ್ಷ್ಮಿ ಮೃತಪಟ್ಟಿರೋದನ್ನ ತಿಳಿಯದ 10 ವರ್ಷದ ಶ್ಯಾಮ್ 4 ದಿನ ತಾಯಿಯ ಪಕ್ಕದಲ್ಲಿಯೇ ಮಲಗಿದ್ದಾನೆ.
ಪ್ರತಿ ದಿನವೂ ಶಾಲೆಗೆ ಹೋಗುತ್ತಿದ್ದಾನೆ. ಮನೆಯಲ್ಲಿ ಉಳಿದ ತಿಂಡಿ ತಿಂದು ಕಾಲ ಕಳೆದಿದ್ದಾರೆ.
ಕೊನೆಗೆ ತಾಯಿಯ ದೇಹದಿಂದ ವಾಸನೆ ಬಂದಾಗಿ, ತನ್ನ ಮಾವನಿಗೆ ಕರೆ ಮಾಡಿ, ಅಮ್ಮನಿಗೆ ಹುಷಾರಿಲ್ಲ.
ನಾಲ್ಕು ದಿನದಿಂದ ಮಲಗೇ ಇದ್ದಾಳೆ, ಈಗ ಮನೆ ತುಂಬಾ ವಾಸನೆ ಬರ್ತಿದೆ. ನೀವು ಬೇಗ ಬನ್ನಿ ಆಪರೇಷನ್ ಮಾಡೋಣ ಎಂದಿದ್ದಾರೆ.
ಅವನ ಮಾತುಗಳನ್ನ ಕೇಳುತ್ತಿದ್ದಂತೆ ಗಾಬರಿಯಿಂದ ಮನೆಗೆ ಶ್ಯಾಮ್ ಮಾವ ಬಂದಿದ್ದು, ರಾಜಲಕ್ಷ್ಮಿ ಮೃತಪಟ್ಟಿರೋದು ಗೊತ್ತಾಗಿದೆ.
ಅಂದಹಾಗೆ ರಾಜಲಕ್ಷ್ಮಿ ಕೌಟುಂಬಿಕ ಕಲಹದಿಂದಾಗಿ ಗಂಡನೊಂದಿಗೆ ಬೇರ್ಪಟ್ಟು ತನ್ನ ಮಗನೊಂದಿಗೆ ವಾಸವಿದ್ದಳು.
ಮಾರ್ಚ್ 8 ರಂದು ಅನಾರೋಗ್ಯದಿಂದ ಮಲಗಿದ್ದ ರಾಜಲಕ್ಷ್ಮಿ ಎದ್ದೇಳಲೇ ಇಲ್ಲ. ತಾಯಿ ಮೃತಪಟ್ಟಿರುವ ಬಗ್ಗೆ ತಿಳಿದ ಶ್ಯಾಮ್ ಎಂದಿನಂತೆ ತಾಯಿ ಜೊತೆ ಇದ್ದಾನೆ.
ಮಹಿಳೆ ಸಾವಿಗೆ ನಿಜವಾದ ಕಾರಣ ತಿಳಿಯಲು ಪೊಲೀಸರು ಶವವನ್ನು ಆಸ್ಪತ್ರೆಗೆ ಸಾಗಿಸಿದ್ದು, ತನಿಖೆ ಮುಂದುವರೆಸಿದ್ದಾರೆ.









