ಥೂ ಎಂಥಾ ‘ಮೃಗಗಳು’ ಇವರು… ವೃದ್ಧ ಪೋಷಕರ ಕೂಡಿ ಹಾಕಿ ಚಿತ್ರಹಿಂಸೆ: ಹಸಿವಿನಿಂದ ತಂದೆ ಸಾವು..!
ಕೇರಳ: ಜನ್ಮ ನೀಡಿದ ತಂದೆ ತಾಯಿಯನ್ನ ಹಲವರು ವೃದ್ಧಾಶ್ರಮ ಸೇರಿಸಿಬಿಡ್ತಾರೆ. ಕೆಲವರು ಮನೆಯಿಂದ ಆಚೆಯೂ ಹಾಕ್ತಾರೆ. ಇಲ್ಲೊಬ್ಬ ಪಾಪಿ ಮಗ ನಿನ್ನೆ ಮೊನ್ನೆ ಬಂದ ಹೆಂಡತಿ ಜೊತೆಗೂಡಿ ತನ್ನ ವೃದ್ಧ ಪೋಷಕರಿಗೆ ಕೊಡಬಾರದ ಹಿಂಸೆ ಕೊಟ್ಟು ಕೊನೆಗೆ ತಂದೆಯ ಸಾವಿಗೆ ಕಾರಣನಾಗಿದ್ದಾನೆ. ತಂದೆ ತಾಯಿಯನ್ನ ಕೋಣೆಯಲ್ಲಿ ಕೂಡಿ ಹಾಕಿ ಆಹಾರ ನೀಡದೆ ಚಿತ್ರಹಿಂಸೆ ನೀಡಿದ್ದಾರೆ. ಇಂತಹ ಮನಕಲುಕುವ ಘಟನೆ ಕೇರಳದ ಕೊಟ್ಟಾಯಂನ ಮುಂಡಕಾಯಂನಲ್ಲಿ ಬೆಳಕಿಗೆ ಬಂದಿದೆ.
ಥೂ ಎಂಥಾ ‘ಮೃಗಗಳು’ ಇವರು… ವೃದ್ಧ ಪೋಷಕರ ಕೂಡಿ ಹಾಕಿ ಚಿತ್ರಹಿಂಸೆ: ಹಸಿವಿನಿಂದ ತಂದೆ ಸಾವು..!
ಇನ್ನೂ ಹಸಿವಿನಿಂದ ಬಳಲುತ್ತಿದ್ದ ವೃದ್ಧ ತಂದೆ ಮೃತಪಟ್ಟಿದ್ರೆ, ತಾಯಿ ಮಾನಸಿಕ ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 80 ವರ್ಷದ ಪೊಡಿಯಾನ್ ಮೃತಪಟ್ಟಿದ್ದು, 76 ವರ್ಷದ ಪತ್ನಿ ಅಮ್ಮಿನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಡಿಯಾನ್ ಹಾಗೂ ಅಮ್ಮಿನಿ ಇಬ್ಬರು ತಮ್ಮ ಹಿರಿಯ ಮಗ ರೆಜಿ ಜೊತೆಗೆ ವಾಸವಿದ್ದರು. ಆದ್ರೆ ಹಲವು ದಿನಗಳ ಹಿಂದೆಯೇ ರೆಜಿ ಪೋಷಕರನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದು, ಆಹಾರ ನೀರು ನೀಡದೆ ಚಿತ್ರಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲ ನೆರೆಮನೆಯವರು ಮನೆಗೆ ಬಂದು ವೃದ್ಧರನ್ನ ರಕ್ಷಣೆ ಮಾಡಬಹುದು ಎಂದು ಮನೆಯ ಗೇಟ್ ಬಳಿಯೇ ನಾಯಿಯನ್ನು ಕಟ್ಟಿ ಹಾಕಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮರ್ಯಾದೆ ಕೊಡದ ಮಗನ ತಲೆ-ಕೈಕಾಲು ಕಡಿಸಿದ ಪಾಪಿ ತಂದೆ : ಚಿಕ್ಕ ಮಗನಿಂದಲೇ ಸುಪಾರಿ ಕೊಡಿಸಿದ ಕ್ರೂರಿ..!
ರೆಜಿ ಮದ್ಯವ್ಯಸನಿಯಾಗಿದ್ದ. ಕಿರಿಯ ಪುತ್ರ ದೂರವಿದ್ದ ಎನ್ನಲಾಗಿದೆ. ಆಶಾ ಕಾರ್ಯಕರ್ತರು ಹಾಗೂ ಇತರೆ ಸಂಘಟನೆಗಳ ಕಾರ್ಯಕರ್ತರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel