ಮುಂಬೈ: ನನ್ನ ಮೇಲಿನ ದಾಳಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ನೇರ ಕಾರಣ ಎಂದು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಆರೋಪಿಸಿದ್ದಾರೆ. ದಾಳಿಗೆ ಸಂಬಂಧಿಸಿದಂತೆ ಸ್ವತಃ ಅರ್ನಬ್ ಗೋಸ್ವಾಮಿಯವರೇ ವಿಡಿಯೋ ಸಂದೇಶದ ಮೂಲಕ ಟ್ವೀಟ್ ಮಾಡಿದ್ದಾರೆ.
ಅರ್ನಬ್ ವಿಡಿಯೋದಲ್ಲಿ ಹೇಳಿದ್ದೇನು?
ಇಂದು ನಡುರಾತ್ರಿ 12.15ರ ನಡುರಾತ್ರಿ ನಾನು ಮತ್ತು ಪತ್ನಿ ಸ್ಟುಡಿಯೋದಿಂದ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಮನೆ ಕಡೆಗೆ ಹೋಗುತ್ತಿದ್ದೆವು. ಇಬ್ಬರು ಬೈಕಿನಲ್ಲಿ ಬಂದು ಓವರ್ ಟೇಕ್ ಮಾಡಿ ನನ್ನ ಕಾರನ್ನು ಅಡ್ಡಗಟ್ಟಿ ನನ್ನೆಡೆಗೆ ಗುರಿಯಾಗಿಟ್ಟು ಕಾರಿನ ಮೇಲೆ ಒಂದೇ ಸಮನೆ ದಾಳಿ ನಡೆಸಿದರು. ಕಾರಿನ ಕಿಟಕಿಗಳನ್ನು ಒಡೆಯಲು ಆರಂಭಿಸಿದರು.
ಅಲ್ಲದೆ ಯಾವುದೋ ದ್ರಾವಣವನ್ನು ಕಾರಿನ ಮೇಲೆ ಸುರಿದರು.ದಾಳಿಕೋರರು ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ನನ್ನ ಮೇಲೆ ಹಲ್ಲೆ ಮಾಡಲು ಕಳುಹಿಸಲಾಗಿದೆ ಎಂದು ಭದ್ರತಾ ಸಿಬ್ಬಂದಿ ನನಗೆ ಹೇಳಿದ್ದಾರೆ. ಈ ಘಟನೆ ನನ್ನ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ನಡೆದಿದೆ.
ವಿಡಿಯೋದಲ್ಲಿ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪಿಸಿದ ಅವರು, ನನ್ನ ಮೇಲಿನ ದಾಳಿಗೆ ಸೋನಿಯಾ ಗಾಂಧಿಯೇ ನೇರ ಹೊಣೆ. ಸದ್ಯ ಈ ದೇಶದ ಅತಿದೊಡ್ಡ ಹೇಡಿ ನೀವು. ನಿಮಗೆ ನನ್ನನ್ನು ಎದುರಿಸುವ ಧೈರ್ಯ ಇಲ್ಲ. ಈ ಘಟನೆಗೆ ನೀವೇ ಕಾರಣ ಎಂದು ಹೇಳುತ್ತೇನೆ. ನನಗೆ ಏನೇ ಆದರೂ ಅದಕ್ಕೆ ನೀವೇ ಹೊಣೆ ಎಂದು ಸೋನಿಯಾ ಮತ್ತು ಅವರ ಕುಟುಂಬಸ್ಥರ ಹೆಸರನ್ನು ಪ್ರಸ್ತಾಪಿಸಿದ್ದಾರೆ.