Sonny Ramadhin | ವಿಂಡೀಸ್ ಸ್ಪಿನ್ ದಿಗ್ಗಜ ಸೋನಿ ರಾಮ್ದಿನ್ ಇನ್ನಿಲ್ಲ
ಕೆರಿಬಿಯನ್ ಪರ ಆಡಿದ ಮೊದಲ ಭಾರತೀಯ ಮೂಲದ ಕ್ರಿಕೆಟಿಗ ಮತ್ತು ಇಂಗ್ಲೆಂಡ್ ಅನ್ನು ಮೊದಲ ಬಾರಿಗೆ ಸೋಲಿಸಿದ ವಿಂಡೀಸ್ ತಂಡದ ಸದಸ್ಯ ಸ್ಪಿನ್ ದಿಗ್ಗಜ ಸೋನಿ ರಾಮ್ದಿನ್ ಭಾನುವಾರ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಮ್ ದಿನ್ ಕೊನೆಯುಸಿರೆಳೆದಿರುವುದಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಮೊದಲ ಮಿಸ್ಟರಿ ಸ್ಪಿನ್ನರ್ ಎಂದು ಗುರುತಿಸಲ್ಪಟ್ಟ ರಾಮ್ದಿನ್ ತಮ್ಮ ವೃತ್ತಿಜೀವನದಲ್ಲಿ 43 ಟೆಸ್ಟ್ಗಳಲ್ಲಿ 158 ವಿಕೆಟ್ಗಳನ್ನು ಪಡೆದಿದ್ದರು.
ಅವರು ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 184 ಪಂದ್ಯಗಳನ್ನು ಆಡಿ 758 ವಿಕೆಟ್ಗಳನ್ನು ಪಡೆದಿದ್ದಾರೆ.
sonny-ramadhin-no more









