ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಬಡಬಗ್ಗರಿಗೆ ವಲಸೆ ಕಾರ್ಮಿಕರಿಗೆ , ಕಷ್ಟದಲ್ಲಿದ್ದ ಅನೇಕರಿಗೆ ಸಹಾಯ ಮಾಡಿಕೊಂಡು ರೀಲ್ ಲೈಫ್ ನ ವಿಲನ್ ಸೋನು ಸೂದ್ ಅವರು ಜನರ ಪಾಲಿನ ರಿಯಲ್ ಹೀರೋ ಆಗಿದ್ದಾರೆ. ಇದೀಗ ಸೋನು ಸೂದ್ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ತಮ್ಮ ತಾಯಿ ಸರೋಜ್ ಸೂದ್ ಅವರ ಹೆಸರಿನಲ್ಲಿ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲು ಸೋನು ಸೂದ್ ಮುಂದಾಗಿದ್ದಾರೆ.
ಇನ್ನೂ ವಾರ್ಷಿಕ ಆದಾಯ 2 ಲಕ್ಷ ರೂಗಿಂತ ಕಡಿಮೆ ಇರುವ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ, ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆ ಉತ್ತಮವಾಗಿರಬೇಕು ಎಂದು ಸೋನು ಕಂಡೀಷನ್ ಹಾಕಿದ್ದಾರೆ. ಅರ್ಹ ವಿದ್ಯಾರ್ಥಿಗಳ ಕೋರ್ಸ್ ಶುಲ್ಕಗಳು, ಹಾಸ್ಟೆಲ್ ವಸತಿ ಮತ್ತು ಎಲ್ಲಾ – ವೆಚ್ಚಗಳನ್ನು ಸೋನು ಸೂದ್ ಭರಿಸಲಿರುವುದಾಗಿ ತಿಳಿಸಿದ್ದಾರೆ. ಇನ್ನೂ ಸೋನು ಸೂದ್ ಅವರ ತಾಯಿಯ ಹಯಾದಿಯನ್ನೇ ಅನುಸರಿಸುತ್ತಿದ್ದಾರೆ. ಅವರ ತಾಯಿ ಸರೋಜ್ ಸೂದ್ ಮೊಗಾ ಪ್ರೊಫೆಸರ್ ಆಗಿ, ಉಚಿತವಾಗಿ ಪಠ್ಯ ಬೋಧಿಸುತ್ತಿದ್ದರಂತೆ. ಹೀಗಾಗಿ ತಾಯಿ ಕೆಲಸವನ್ನು ಮುಂದುವರೆಸಿದ್ದಾರೆ ಸೋನು.
https://youtu.be/I5BRabD3f5A?list=UUJKHM6z4CpcN_F-SuK2wPDw