Ukraineನಲ್ಲಿ ಸಿಲುಕಿಕೊಂಡ ಭಾರತೀಯರು.. ಅಖಾಡಕ್ಕಿಳಿದ ಸೋನು
ನಟ ಸೋನು ಸೂದ್ ಯಾರಿಗೆ ತಾನೇ ಗೊತ್ತಿಲ್ಲ. ಕೊರೊನಾ ಸಂಕಷ್ಟದಲ್ಲಿ ಸೋನು ಸೂದ್ ಮಾಡಿದ ಸಹಾಯವನ್ನ ಭಾರತೀಯರು ಮರೆಯೋಕೆ ಸಾಧ್ಯನಾ…?
ಕೊರೊನಾ ಕಷ್ಟಕಾಲದಲ್ಲಿ ಕೇಳಿದವರಿಗೆಲ್ಲಾ ಕೈಲಾದ ಸಹಾಯ ಮಾಡಿದ ಸೋನು ಸೂದ್, ರಿಯಲ್ ಹೀರೋ ಅಂತಾ ಕರೆಸಿಕೊಂಡವರು.
ಇದೀಗ ಈ ರಿಯಲ್ ಹೀರೋ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಉಕ್ರೇನ್ ನ ಖಾರ್ಕಿವ್ ನಲ್ಲಿ ಸೋನು ಸೂದ್ ಗೆ ಸಂಬಂಧಿಸಿದ ಚಾರಿಟಿ ಸಂಸ್ಥೆ ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಿದೆ.
ಖಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಈ ಚಾರಿಟಿ ಕೆಲಸ ಮಾಡುತ್ತಿದೆ.
ಖಾರ್ಕಿವ್ ಗಡಿಯಿಂದ ಪೋಲೆಂಡ್‌ಗೆ ಭಾರತೀಯರನ್ನು ಸ್ಥಳಾಂತರಿಸಲು ಚಾರಿಟಿಯ ಸದಸ್ಯರು ಸಹಾಯ ಮಾಡುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ.
ಮಧ್ಯಪ್ರದೇಶದ ರೇವಾ ಮೂಲದ ವಿದ್ಯಾರ್ಥಿನಿ ಈ ಬಗ್ಗೆ ಮಾತನಾಡುತ್ತಾ, ಸೋನು ಸೂದ್ ಗೆ ಧನ್ಯವಾದ ತಿಳಿಸಿದ್ದಾರೆ.
Students stranded in #UkraineRussiaWar thanking @SonuSood for helping them in getting out from Ukrainian soil. https://t.co/IvW59fswVC pic.twitter.com/4Cp7agyU0h
— Ayushmann Kumar (@Iam_Ayushmann) March 2, 2022
ಸೋನು ಸೂದ್ ನಮಗೆ ಸಹಾಯ ಮಾಡಿದ್ದು, ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಸೋನು ಸೂದ್, ಇದು ನನ್ನ ಜವಾಬ್ದಾರಿ.. ನನ್ನ ಪಾಲಿನ ಸಹಾಯ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ.