sonu sood : ಪುಟ್ ಬೋರ್ಡ್ ಮೇಲೆ ಕುಳಿತ ನಟನಿಗೆ ಬುದ್ದಿ ಹೇಳಿದ ರೈಲ್ವೆ ಇಲಾಖೆ…
ರೈಲಿನ ಪುಟ್ ಬೋರ್ಡ್ ಮೇಲೆ ಕುಳಿತು ಪ್ರಯಾಣಿಸಿದ ಬಾಲಿವುಡ್ ನಟ ಸೋನು ಸೂದ್ ಗೆ ಉತ್ತರ ರೈಲ್ವೆ ಇಲಾಖೆ ಬುದ್ದಿವಾದ ಹೇಳಿದೆ. ದಯವಿಟ್ಟು ಈ ರೀತಿ ಮಾಡಬೇಡಿ ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದು ಅಪಾಯಾಕಾರಿ ಎಂದು ರೈಲ್ವೆ ಹೇಳಿದೆ. ಇದಾದ ನಂತರ ಸೋನು ಸೂದ್ ತಕ್ಷಣ ಕ್ಷಮೆ ಯಾಚಿಸಿದ್ದಾರೆ.
ಸೋನು ಸೂದ್ ಡಿಸೆಂಬರ್ 13 ರಂದು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪ್ರಸಿದ್ಧ ಬಾಲಿವುಡ್ ಹಾಡು ‘ಮುಸಾಫಿರ್ ಹೂ ಯಾರೋನ್’ ಹಿನ್ನಲೆಯಲ್ಲಿ ಪ್ಲೇ ಆಗುತ್ತಿರುವಾಗ ರೈಲಿನ ಫುಟ್‌ರೆಸ್ಟ್ ಮೇಲೆ ಸೋನು ಸೂದ ಕುಳಿತಿರುವುದು ನೋಡಬಹುದು.
ಉತ್ತರ ರೈಲ್ವೇ ಜನವರಿ 3 ರಂದು ಸೋನು ಸೂದ್ ಅವರ ಟ್ವೀಟ್ ಅನ್ನ ಮರು ಟ್ವೀಟ್ ಮಾಡಿದ್ದು, “ಪ್ರಿಯ ಸೋನು ಸೂದ್, ನೀವು ದೇಶ ಮತ್ತು ವಿಶ್ವದ ಲಕ್ಷಾಂತರ ಜನರಿಗೆ ಮಾದರಿ. ರೈಲು ಮೆಟ್ಟಿಲುಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿ, ಈ ರೀತಿಯ ವೀಡಿಯೊ ನಿಮ್ಮ ಅಭಿಮಾನಿಗಳಿಗೆ ತಪ್ಪು ಸಂದೇಶವನ್ನು ಕಳುಹಿಸಬಹುದು. ದಯವಿಟ್ಟು ಇದನ್ನು ಮಾಡಬೇಡಿ. ಸುಗಮ ಮತ್ತು ಸುರಕ್ಷಿತ ಪ್ರಯಾಣವನ್ನು ಆನಂದಿಸಿ ಎಂದು ಟ್ವೀಟ್ ಮಾಡಿದೆ.
ಕ್ಷಮೆ ಯಾಚಿಸಿದ ಸೋನು ಸೂದ್
ಸೋನು ಸೂದ್ ಜನವರಿ 5 ರಂದು ಈ ವಿಷಯದ ಬಗ್ಗೆ ರೈಲ್ವೆಯಲ್ಲಿ ಕ್ಷಮೆಯಾಚಿಸಿದ್ದಾರೆ. “ಲಕ್ಷಾಂತರ ಬಡವರು ಹೇಗೆ ಭಾವಿಸುತ್ತಿದ್ದಾರೆಂದು ನೋಡಲು ನಾನು ಅಲ್ಲಿ ಕುಳಿತೆ ಅವರ ಜೀವನವು ಇನ್ನೂ ರೈಲು ಬಾಗಿಲುಗಳ ಮೂಲಕ ಹಾದುಹೋಗುತ್ತದೆ. ದೇಶದ ರೈಲ್ವೆ ವ್ಯವಸ್ಥೆಯನ್ನು ಸುಧಾರಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಮರು ಟ್ವೀಟ್ ಮಾಡಿದ್ದಾರೆ. ಸೋನು ಸೂದ್ ಅವರ ವಿಡಿಯೋವನ್ನು ಟ್ವಿಟರ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
Sonu Sood Indian Railways Sonu Sood Sitting At Train Door








