ರಾಜಕೀಯಕ್ಕೆ ಎಂಟ್ರಿ ಬಗ್ಗೆ ‘ರಿಯಲ್ ಹೀರೋ’ ಹೇಳಿದ್ದೇನು..?
ಮುಂಬೈ : ಕಳೆದ ವರ್ಷ ಕೋವಿಡ್ ಅಲೆ ಲಾಕ್ ಡೌನ್ ನಂತರ ಶುರುವಾದ ಸೋನು ಸೂದ್ ಮಾನವೀಯತಾ, ಸಮಾಜಮುಖಿ ಕೆಲಸಗಳು ಈವರೆಗೂ ನಿಂತಿಲ್ಲ. ಕಷ್ಟ ಅಂತ ಬಂದೋರಿಗೆ ಕೈಲಾದ ಸಸಹಾಯ ಮಾಡದೇ ಬಿಡಲ್ಲ. ಬಡವ ಶ್ರೀಮಂತ ಅಂತ ನೋಡದೇ , ಜಾಗ ಯಾವುದೇ ಇರಲಿ , ಜನ ಯಾರೇ ಇರಲಿ ಕಷ್ಟಕ್ಕೆ ನೆರವಾಗಿ ಬಡವರ ಪಾಲಿನ ದೇವಾರಾಗಿದ್ದಾರೆ ರಿಯಲ್ ಹೀರೋ ಸೋನು ಸೂದ್..
ಬೆಡ್ ಕೊಡಿಸುವುದು , ಆಕ್ಸಿಜನ್ ಪೂರೈಕೆ, ವಿದ್ಯಾರ್ಥಿಗಳಿಗೆ ನೆರವಾಗುದು , ಆಹಾರ ಪೂರೈಕೆ ಹೀಗೆ ಅನೇಕರಿಗೆ ತಮ್ಮ ಫೌಂಡೇಶನ್ ಮೂಲಕ ಸಹಾಯ ಮಾಡ್ತಿರುವ ಸೋನು ಅಪಾರ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ.. ಅಭಿಮಾನಿಗಳು ಸಹೃದಯಿ ಸೋನು ಅವರನ್ನ ಆರಾಧಿಸುತ್ತಿದ್ದಾರೆ.
ಈ ನಡುವೆ ಸೋನು ಸೂದ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆಗಳು ಜೋರಾಗಿವೆ.. ಸೋನು ಸೂದ್ ರಾಜಕೀಯಕ್ಕೆ ಬರುತ್ತಾರಾ ಅನ್ನೋ ಪ್ರಶ್ನೆಗಳು ಕಾಡುತ್ತಿವೆ.. ಸಾಲದಕ್ಕೆ ಕೆಲ ದಿನಗಳ ಹಿಂದೆ ಬಾಲಿವುಡ್ ನ ನೌಟಂಕಿ ಕ್ವೀನ್ ರಾಖಿ ಸಾವಂತ್ ಸಹ ಸೋನು ಸೂದ್ ಅವರು ಪ್ರಧಾನಿಯಾಗಬೇಕೆಂಬ ಅಭಿಪ್ರಾಯ ಹೊರಗೆಡವಿದ್ರು.. ಇದಾದ ನಂತರ ರಿಯಲ್ ಹೀರೋ ಸೋನು ಸೂದ್ ರಾಜಕೀಯ ಪ್ರವೇಶಿಸಿ ಜನನಾಯಕನಾದ್ರೆ ಬಡವರಿಗೆ ಸಹಾಯವಾಗಬಹುದು ಅನ್ನೋ ಚರ್ಚೆಗಳು ನಡೆಯುತ್ತಿವೆ..
ಆದ್ರೆ ರಾಜಕೀಯಕ್ಕೆ ಎಂಟ್ರಿಯಾಗ್ತಾರ ಇಲ್ವಾ ಅನ್ನೋ ಗೊಂದಲಗಳಿಗೆ ಖುದ್ದು ಸೋನು ಉತ್ತರ ನೀಡಿದ್ದಾರೆ. ರಾಜಕೀಯ ನನ್ನ ಉದ್ದೇಶವಲ್ಲ ‘ನಾನು ಒಬ್ಬ ನಟ ಎನ್ನುವುದನ್ನು ಯಾವಾಗಲೂ ಹೇಳಿಕೊಳ್ಳುತ್ತಿದ್ದೇನೆ. ಒಂದು ವೃತ್ತಿಯಾಗಿ ಇದನ್ನು ಇಷ್ಟ ಪಡುತ್ತೇನೆ’ ಎಂದು ಸೋನು ಸೂದ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ‘ಸದ್ಯಕ್ಕೆ ರಾಜಕೀಯ ಪ್ರವೇಶ ಮಾಡುವ ಯಾವುದೇ ಉದ್ದೇಶ ನನಗಿಲ್ಲ’ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಅಲ್ಲದೇ ಎಲ್ಲಿದ್ದರೂ ಜನರಿಗೆ ಸಹಾಯ ಮಾಡಬಹುದು. ನನ್ನದೇ ರೀತಿಯಲ್ಲಿ ಪ್ರತಿದಿನ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೆಲವರು ಜನರಿಗೆ ನೆರವು ನೀಡಲು ಬೇರೆ ಮಾರ್ಗ ಹುಡುಕಿಕೊಳ್ಳಬಹುದು ಎಂದು ಸೋನು ಸೂದ್ ತಿಳಿಸಿದ್ದಾರೆ.
ಇದೇ ವೇಳೆ ‘ಕಳೆದ ವರ್ಷ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ರೈಲು, ಬಸ್ಗಳಲ್ಲಿ ಹೋದಾಗ ನಾನು ಅದನ್ನು ಬಹಳ ಹತ್ತಿರದಿಂದ ನೋಡಿದೆ. ಆ ದೃಶ್ಯಗಳನ್ನು ನನ್ನನ್ನು ಬೆಚ್ಚಿ ಬೀಳಿಸಿತು. ಅದನ್ನು ನೋಡಿದ್ಮೇಲೆ ಜನರಿಗೆ ಸಹಾಯ ಮಾಡಬೇಕು ಎಂದು ಮನಸ್ಸಿನಲ್ಲಿ ಹುಟ್ಟಿಕೊಂಡಿತು. ಎಲ್ಲವೂ ಅರಂಭವಾಗಿದ್ದು ಅಲ್ಲಿಂದಲೇ. ನಾನು ಮತ್ತು ನನ್ನ ತಂಡ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.








