‘ನನ್ನ ಗರ್ಲ್ ಫ್ರೆಂಡ್ ಗೆ ಐ ಫೋನ್ ಕೊಡಿಸಿ’ ಎಂದವನಿಗೆ ಸೋನು ಕೊಟ್ಟ ಉತ್ತರ ಏನು ಗೊತ್ತಾ..?
ಸೋಸು ಸೂದ್ ತಮ್ಮ ಮಾನವೀಯ ಗುಣಗಳಿಂದಲೇ ಜನರ ಮನಗೆದ್ದಿರುವ ಸಹೃದಯಿ.. ಕಷ್ಟ ಅಂತ ಬಂದವರು ಯಾರೇ ಇರಲಿ ಸಹಾಯ ಮಾಡುವ ಸೋನು ಕಳೆದ ಲಾಕ್ ಡೌನ್ ನಿಂದ ಹಿಡಿದು ಇಲ್ಲಿಯವರೆಗೂ ಅನೇಕರಿಗೆ ನೆರವಾಗಿ ರಿಯಲ್ ಹೀರೋ ಆಗಿದ್ದಾರೆ.. ಆದ್ರೆ ಕೆಲವೊಮ್ಮೆ ಕೆಲವಟು ಸೋನು ಅವರನ್ನ ಟೀಕೆ ಮಾಡುತ್ತಾ ಟ್ರೋಲ್ ಗಳನ್ನ ಮಾಡುವವರೂ ಇದ್ದಾರೆ.. ಇನ್ನೂ ಕೆಲವರು ನೆಗ್ಲಿಜೆನ್ಸಿಯ ಕಮೆಂಟ್ ಗಳು , ಮನವಿಗಳನ್ನ ಮಾಡಿರುವವರೂ ಇದ್ದಾರೆ.. ಅಂತವರಿಗೆ ಸೋನು ಸಸೂದ್ ಸಹ ತಕ್ಕನಾದ ಉತ್ತರವನ್ನ ನೀಡಿದ್ಧಾರೆ.
ಮಗನಿಗೆ ದುಬಾರಿ ಕಾರ್ ಗಿಫ್ಟ್ – ವದಂತಿಗಳಿಗೆ ಸ್ಪಷ್ಟನೆ ಕೊಟ್ಟ ಸೋನು ಸುದ್
ಸೋನು ಸೂದ್‌ಗೆ ಸಹಾಯ ಕೋರಿ ಸಾವಿರಾರು ಮೆಸೇಜ್‌ಗಳು ಬರುತ್ತವೆ. ಪ್ರತ್ಯೇಕ ಸಹಾಯವಾಣಿಯನ್ನು ತೆರೆದರು, ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಾವಿರಾರು ಮಂದಿ ಸಹಾಯ ಕೋರಿ ಸಂದೇಶ ಕಳುಹಿಸುತ್ತಿರುತ್ತಾರೆ. ಇದರಲ್ಲಿ ಸಾಧ್ಯವಾದಷ್ಟು ಮಂದಿಗೆ ಸೋನು ಸೂದ್ ಸಹಾಯ ಮಾಡುತ್ತಾರೆ. ಆದ್ರೆ ಇತ್ತೀಚಿಗೆ ನೆಟ್ಟಿಗನೊಬ್ಬ ಸೋನು ಸೂದ್ ಬಳಿ ‘ಸಹೋದರ, ನನ್ನ ಗರ್ಲ್ ಫ್ರೆಂಡ್ ಐ ಫೋನ್ ಕೇಳುತ್ತಿದ್ದಾಳೆ. ನನಗೆ ಸಹಾಯ ಮಾಡುತ್ತೀರಾ?’ ಎಂದು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, ‘ನಿಮ್ಮ ಗರ್ಲ್ ಫ್ರೆಂಡ್ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಅವಳಿಗೆ ಐ ಫೋನ್ ನೀಡಿದರೆ, ನಿಮಗೇನು ಪ್ರಯೋಜನ ವಾಗುವುದಿಲ್ಲಾ..?,’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಸೋನು ಸೂದ್ ಬಳಿ ಐ ಫೋನ್ ಸಹಾಯ ಕೇಳಿದ ನೆಟ್ಟಿಗನನ್ನು ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಸೋನು ಉತ್ತರ ನೆಟಗಟಿಗರ ಮನಗೆದ್ದಿದೆ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








