1 ಕೋಟಿ ರೂಪಾಯಿ ಕೊಡಿ ಎಂದ ನೆಟ್ಟಿಗನಿಗೆ ರಿಯಲ್ ಹೀರೋ ಸೋನು ಕೊಟ್ಟ ಉತ್ತರ ಇದು..!
ಭಾರತೀಯರು , ಬಡವರ ಪಾಲಿಗೆ ರಿಯಲ್ ಹೀರೋ ಆಗಿರುವ ಸೋನು ಮಾನವೀಯ ಕೆಲಸಗಳ ಬಗ್ಗೆ ಎಷ್ಟು ಗುಣಗಾನ ಮಾಡಿದರೂ ಸಾಕಾಗೋದಿಲ್ಲ.. ಎಲ್ಲೆ ಮೀರಿ ಸಹಾಯ ಬೇಡುವವರಿಗೆ ಸಹಾಯ ಮಾಡುತ್ತಾರೆ ಸೋನು.. ಆದ್ರೆ ಆಗಾಗ ಸೋನು ಸೂದ್ ಬಳಿ ಕೆಲ ತರ್ಲೆ ನೆಟ್ಟಿಗರು ವಿಚಿತ್ರ ಬೇಡಿಕೆಗಳನ್ನ ಇಡ್ತಾರೆ.. ಅದು ಸೋನು ಅಭಿಮಾನಿಗಳನ್ನ ಕೆರಳಿಸಿದ್ರೂ ಕೂಡ ಸೋನು ಮಾತ್ರ ಕಾಮ್ ಆಗಿ ವ್ಯಂಗ್ಯಾತ್ಮಕವಾಗಿ ಉತ್ತರಿಸುತ್ತಾರೆ.
ಇದೀಗ ಸೋನು ಸೂದ್ಗೆ ಅಭಿಮಾನಿಯೊಬ್ಬ ಟ್ವಿಟ್ಟರ್ನಲ್ಲಿ ಒಂದು ಕೋಟಿ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ನೆಟ್ಟಿಗನ ಬೇಡಿಕೆಗೆ ಸೋನು ಸೂದ್ ತಮಾಷೆಯಾಗಿ ಉತ್ತರಿಸಿದ್ದಾರೆ. ಮಹೇಂದ್ರ ಎನ್ನುವ ಟ್ವಿಟ್ಟರ್ ಬಳಕೆದಾರ, “ಸರ್ ದಯವಿಟ್ಟು ನನಗೆ ಒಂದು ಕೋಟಿ ರೂಪಾಯಿ ನೀಡಿ” ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಸೋನು ಸೂದ್ “ಬಾಸ್ ಕೇವಲ 1 ಕೋಟಿ ರೂ.? ನೀವು ಹೆಚ್ಚಿನದನ್ನು ಕೇಳಬಹುದಿತ್ತು” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸೋನು ಸೂದ್ ಉತ್ತರದ ಬಳಿಕ ನೆಟ್ಟಿಗ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾನೆ.








