ʻಸ್ಟೇಟ್‌ಐಕಾನ್ʼ ಸ್ಥಾನದಿಂದ ಕೆಳಗಿಳಿದ ಸೋನು ಸೂದ್
ಕಳೆದ ಲಾಕ್ ಡೌನ್ ಸಂದರ್ಭದಿಂದಲೂ ಇಲ್ಲಿಯವರೆಗೂ ಜನರಿಗೆ ಸಹಾಯ ಮಾಡುತ್ತಾ ರಿಯಲ್ ಲೈಫ್ ನ ಹೀರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ತಮಗೆ ನೀಡಲಾಗಿದ್ದ ಸ್ಥಾನದಿಂದ ಕೆಳಗಿಳಿದಿದ್ದಾರೆ..
ಹೌದು ಸೋನು ಸೂದ್ ಅವರು ಶುಕ್ರವಾರ ಸ್ವಯಂಪ್ರೇರಿತರಾಗಿ ಪಂಜಾಬ್‌ನ ʻಸ್ಟೇಟ್‌ಐಕಾನ್ʼ ಸ್ಥಾನದಿಂದ ಕೆಳಗಿಳಿದಿದ್ದಾರೆ. ಪಂಜಾಬ್‌ರಾಜ್ಯ ಚುನಾವಣೆಗೂ ಮುನ್ನ ಅವರು ಈ ನಿರ್ಧಾರ ಕೈಗೊಂಡಿದ್ದಾರೆ
ಈ ಬಗ್ಗೆ ಟ್ವೀಟ್‌ಮಾಡಿರುವ ಅವರು, ಎಲ್ಲಾ ಒಳ್ಳೆಯ ವಿಷಯಗಳಂತೆ ಈ ಪ್ರಯಾಣವೂ ಕೊನೆಗೊಂಡಿದೆ. ನಾನು ಸ್ವಯಂಪ್ರೇರಣೆಯಿಂದ ಪಂಜಾಬ್‌ನ ಸ್ಟೇಟ್‌ಐಕಾನ್‌ಸ್ಥಾನದಿಂದ ಕೆಳಗಿಳಿದಿದ್ದೇನೆ. ಪಂಜಾಬ್‌ವಿಧಾನಸಭಾ ಚುನಾವಣೆಯಲ್ಲಿ ನನ್ನ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಸೋನು ಸೂದ್ ನೇಮಕಾತಿಯನ್ನು ಹಿಂಪಡೆದಿರುವುದಾಗಿ ಚುನಾವಣಾ ಆಯೋಗ ಟ್ವೀಟ್‌ಮಾಡಿ ತಿಳಿಸಿದೆ. ಪಂಜಾಬ್‌ನ ಮೋಗಾ ಜಿಲ್ಲೆಯವರಾದ ಸೋನು ಸೂದ್‌ಅವರನ್ನು ಕಳೆದ ವರ್ಷ ಚುನಾವಣೆ ಸಂಸ್ಥೆ ʻಸ್ಟೇಟ್‌ಐಕಾನ್ʼ ಎಂದು ಆಯ್ಕೆ ಮಾಡಿತ್ತು.
ಪಂಜಾಬ್‌ವಿಧಾನಸಭಾ ಚುನಾವಣೆಯಲ್ಲಿ ಸೋನು ಸೂದ್‌ಅವರ ಸಹೋದರಿ ಮಾಳಿವಕಾ ಸೂದ್‌ಸ್ಪರ್ಧಿಸುತ್ತಿದ್ದಾರೆ. ಆದರೆ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಎಎಪಿ ಅಥವಾ ಕಾಂಗ್ರೆಸ್‌ಎರಡರಲ್ಲಿ ಒಂದು ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.








