ಕೋರೊನಾ ಸೋಂಕಿತರ ರಕ್ಷಣೆಗಾಗಿ ವಿದೇಶದಿಂದ ಆಕ್ಸಿಜನ್ ಪ್ಲಾಂಟ್ ಆಮದು – ಆಮ್ಲಜನಕ ಘಟಕ ನಿರ್ಮಾಣಕ್ಕೆ ಮುಂದಾದ ಸೋನು..!
ಕಳೆದ ವರ್ಷ ಲಾಕ್ ಡೌನ್ ಆದಾಗಿನಿಂದಲೂ ಸಂಕಷ್ಟಕ್ಕೆ ಸಿಲುಕಿರುವವರಿಗೆ , ಜಾಗ ಯಾವುದೇ ಇರಲಿ ಜನ ಯಾರೇ ಇರಲಿ ಎಲ್ಲರಿಗೂ ತಮ್ಮ ಕೈಲಾದ ಸಹಾಯ ಮಾಡುತ್ತಾ ಸೋನು ಸೂದ್ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ.. ಕೋವಿಡ್ 2ನೇ ಅಲೆ ಸಂದರ್ಭದಲ್ಲೂ ಕೂಡ ಅವರು ಕೊರೊನಾ ಸೋಂಕಿತರ ನೆರವಿಗೆ ದಾವಿಸಿದ್ದಾರೆ. ದೇಶದಲ್ಲಿ ಆಕ್ಸಿಜನ್ ಕೊರತೆ ಬೆಡ್ ಕೊರತೆಯಿಂದಾಗಿ ಜನ ಪ್ರಾಣ ಬಿಡುತ್ತಿದ್ಧಾರೆ. ಇಂತಹ ಸ್ಥಿತಿಯಲ್ಲಿ ಕೋರೊನಾ ಸೋಂಕಿತರ ಜೀವ ರಕ್ಷಣೆಗಾಗಿ ದೇವರ ರೂಪದಲ್ಲಿ ಮುಂದೆ ಬಂದಿರುವ ಸೋನು ತಮ್ಮ ಕೈಲಾದ ಪ್ರಯತ್ನ ಮಾಡ್ತಿದ್ದಾರೆ.
ಸೋಂಕಿತರು ಆಕ್ಸಿಜನ್ ಸಿಗದೆ ನರಳುತ್ತಿದ್ದಾರೆ. ದೇಶದಲ್ಲಿ ಉಂಟಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸೋನು ವಿದೇಶದಿಂದ ಆಕ್ಸಿಜನ್ ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿರುವ ಜನರಿಗೆ ಜೀವರಕ್ಷಕ ತರಲು ಸೋನು ಸೂದ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ವಿದೇಶದಿಂದ ಆಕ್ಸಿಜನ್ ತರಲು ರಿಯಲ್ ಹೀರೋ ಮುಂದಾಗಿದ್ದಾರೆ. ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಅತೀ ಹೆಚ್ಚು ಕಷ್ಟ ಅನುಭವಿಸುತ್ತಿರುವ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಆಮ್ಲಜನಕ ಸ್ಥಾವರ ಸ್ಥಾಪಿಸಲು ಸೋನು ಸೂದ್ ತೀರ್ಮಾಸಿದ್ದಾರೆ.
ಅದಕ್ಕಾಗಿ ಫ್ರಾನ್ಸ್‌ನಿಂದ ಆಕ್ಸಿಜನ್ ಪ್ಲಾಂಟ್ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೂದ್ ‘ಆಕ್ಸಿಜನ್ ಸಿಗದೆ ಜನರು ತೊಂದರೆ ಪಡುತ್ತಿರುವುದನ್ನು ನೋಡಿದ್ದೇವೆ. ಈಗ ನಾವು ಅದನ್ನು ಪಡೆಯುತ್ತಿದ್ದೇವೆ. ಆಕ್ಸಿಜನ್ ಅನ್ನು ಅಸ್ಪತ್ರೆಗಳಿಗೆ ಸರಬರಾಜು ಮಾಡುವುದಲ್ಲದೆ ಆಮ್ಲಜನಕವನ್ನು ಸಿಲಿಂಡರ್‌ಗಳಲ್ಲಿ ಸದಾ ತುಂಬಿಸಿಡಲು ಸಹಕಾರಿ ಆಗುತ್ತೆ. ಇದು ಕೋವಿಡ್‌ನಿಂದ ಬಳಲುತ್ತಿರುವ ಜನರ ಪ್ರಮುಖ ಸಮಸ್ಯೆಯನ್ನು ಪರಿಹರಿಸುತ್ತದೆ’ ಎಂದು ಸೋನು ಸೂದ್ ಹೇಳಿದ್ದಾರೆ. ಈಗಾಗಲೇ ಸೋನು ಸೂದ್ ಫ್ರಾನ್ಸ್ ಜತೆ ಮಾತುಕತೆ ನಡೆಸಿ ಮೊದಲ ಸ್ಥಾವರವನ್ನು ಆರ್ಡರ್ ಮಾಡಿದ್ದಾರೆ. ಇದು ಭಾರತಕ್ಕೆ ಇನ್ನು 10 ರಿಂದ 12 ದಿನಗಳಲ್ಲಿ ತಲುಪಲಿದೆ. ‘ಈ ಸಮಯ ನಮಗೆ ದೊಡ್ಡ ಸವಾಲಾಗಿದೆ. ಆದಷ್ಟು ಬೇಗ ಆಕ್ಸಿಜನ್ ಆಕ್ಸಿಜನ್ ಬಂದು ತಲುಪುವಂತೆ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಹೆಚ್ಚಿನ ಜೀವಗಳನ್ನು ಉಳಿಸಬಹುದಾಗಿದೆ’ ಎಂದಿದ್ದಾರೆ.








