ಪಾಕಿಸ್ತಾನದಲ್ಲೂ ಬಿಜೆಪಿ ಸರ್ಕಾರ ಬರಲಿದೆ : ಕಂಗನಾ ರಣೌತ್..!
ಇತ್ತೀಚೆಗೆ ಬಾಲಿವುಡ್ ನಟಿ ಕಂಗನಾ ಬಿಜೆಪಿ ವಕ್ತಾರೆಯಂತೆ ಆಡುತ್ತಿದ್ದಾರೆ. ಹೆಚ್ಚಾಗಿ ಬಿಜೆಪಿ ಪರ ನಿಲ್ತಿದ್ದಾರೆ. ಅವರಿಗೆ ಬಿಜೆಪಿಯ ಸಪೋರ್ಟ್ ಇದೆ. ಮುಂದಿನ ಚುನಾವಣೆಯಲ್ಲಿ ಕಂಗನಾ ಗೆಲ್ಲಬಹುದು ಅಂತೆಲ್ಲಾ ವದಂತಿಗಳು ಹರಿದಾಡ್ತಿವೆ. ಅದಕ್ಕೆ ಸರಿಯಾಗಿಯೇ ಕಂಗನಾ ನಡೆವಳಿಯೂ ಇದೆ. ಇದೀಗ ಮತ್ತಷ್ಟು ವದಂತಿಗಳಿಗೆ ತುಪ್ಪ ಸುರಿದ ರೀತಿಯಾದ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ ಕಂಗನಾ. ಹೌದು.. ಕಂಗನಾ ಶೀಘ್ರವೇ ಪಾಕಿಸ್ತಾನದಲ್ಲಿಯೂ ಬಿಜೆಪಿ ಸರ್ಕಾರ ರಚನೆ ಆಗಲಿದೆ ಎಂದಿದ್ದಾರೆ. ಭಾರತ ತಯಾರಿಸಿರುವ 45 ಮಿಲಿಯನ್ ವ್ಯಾಕ್ಸಿನ್ ಅನ್ನು ವ್ಯಾಕ್ಸಿನೇಷನ್ ಮತ್ತು ರೋಗನಿರೋಧ ಮದ್ದು ವಿತರಣೆ ಜಾಗತಿಕ ಒಕ್ಕೂಟ ಕಾರ್ಯಕ್ರಮದಡಿ ಪಾಕಿಸ್ತಾನಕ್ಕೆ ನೀಡುತ್ತಿರುವ ಸುದ್ದಿಯ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, ಪಾಕಿಸ್ತಾನ ಸಹ ನಮ್ಮಿಂದಲೇ ತುಂಡಾದ ಭಾಗ. ಅಲ್ಲೂ ಸಹ ಆದಷ್ಟು ಶೀಘ್ರವಾಗಿ ಬಿಜೆಪಿ ಸರ್ಕಾರ ರಚನೆ ಆಗಲಿದೆ. ಭಯೋತ್ಪಾದಕರು ನಮ್ಮವರಲ್ಲ, ಆದರೆ ಅಲ್ಲಿನ ಜನ ನಮ್ಮವರು ಎಂದಿದ್ದಾರೆ. ಇವರ ಈ ಟ್ವೀಟ್ ಗೆ ಸಾಕಷ್ಟು ನೆಟ್ಟಿಗರು ನಾನಾ ರೀತಿಯಾದ ಕಮೆಂಟ್ ಗಳನ್ನ ಮಾಡ್ತಿದ್ರೆ , ಇನ್ನೂ ಅನೇಕ ಟ್ರೋಲ್ ಪೇಜ್ ಗಳ ಟಾಪ್ ನ್ಯೂಸ್ ಆಗಿದ್ದಾರೆ ಮತ್ತೊಮ್ಮೆ ಕಂಗನಾ.
ಇಷ್ಟಕ್ಕೆ ಸುಮ್ಮನಾಗದೇ ಮತ್ತೊಂದು ಟ್ವೀಟ್ ಮಾಡಿರುವ ಕಂಗನಾ ಮೋದಿಗೆ ನಾವು ಬೇಕಾಗಿಲ್ಲ. ನಮಗೆ ಮೋದಿ ಬೇಕಾಗಿದ್ದಾರೆ. ಅಖಂಡ ಭಾರತ ನಿರ್ಮಾಣಕ್ಕಾಗಿ ಮೋದಿ ನಮಗೆ ಬೇಕಾಗಿದ್ದಾರೆ. ನಾವೆಲ್ಲರೂ ಮತ್ತೆ ಮೋದಿ ಅವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಬೇಕಿದೆ. ಇನ್ನೆರಡು ಭಾರಿ ಅವರು ಪ್ರಧಾನಿ ಆದರೆ ಸಾಕು, ಭಾರತವನ್ನು ತನ್ನ ಹಳೆಯ ಸುವರ್ಣಯುಗಕ್ಕೆ ಮೋದಿ ಕರೆದುಕೊಂಡು ಹೋಗುತ್ತಾರೆ. ಆ ನಂತರ ಅವರು ಏನಾದರೂ ಮಾಡಿಕೊಳ್ಳಲಿ. ಆದರೆ ಈಗ ಮೋದಿ ಅವರ ಪ್ರತಿ ಉಸಿರು ಅಖಂಡ ಭಾರತದ ಕನಸೇ ಕಾಣುತ್ತಿರಬೇಕು. ನಾವೆಲ್ಲರೂ ಮನವಿ ಮಾಡಿದರೆ ಆ ಮನವಿಯನ್ನು ಅವರು ಖಂಡಿತ ಪುರಸ್ಕರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದಿದ್ದಾರೆ.
.








