ಶೀಘ್ರದಲ್ಲೇ ರೈತರು ಪ್ರತಿಭಟನೆ ಹಿಂಪಡೆಯಲಿದ್ದಾರೆ: ರಾಜನಾಥ್ ಸಿಂಗ್
ನವದೆಹಲಿ: ಶೀಘ್ರವೇ ರೈತರು ಪ್ರತಿಭಟನೆ ಹಿಂತೆಗೆದುಕೊಳ್ತಾರೆ ಎಂದು ಕೇಂದ್ರ ರಕ್ಷನಾ ಸಚಿವರಾದ ರಾಜನಾಥ್ ಸಿಂಗ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಅವರು, ಇಂದು ರೈತ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕೆ ಕೊಡುಗೆ ನೀಡಿದ ಎಲ್ಲರನ್ನು ನಾನು ಸ್ವಾಗತಿಸುತ್ತೇನೆ. ಅವರು ದೇಶಕ್ಕೆ ಆಹಾರ ಭದ್ರತೆ ಒದಗಿಸಿದ್ದಾರೆ. ಕೆಲವು ರೈತರು ಕೃಷಿ ಕಾನೂನುಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಸರ್ಕಾರ ಅವರೊಂದಿಗೆ ಸಂಪೂರ್ಣ ಸಂವೇದನಾಶೀಲತೆಯೊಂದಿಗೆ ಮಾತನಾಡುತ್ತಿದೆ. ಅವರು ಶೀಘ್ರದಲ್ಲೇ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಅಂದ್ಹಾಗೆ ಸತತ 28 ದಿನಗಳಿಂದಲೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಅವರ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ.
15 ಜನರಿಗೆ ಕ್ಷಮಾದಾನ… ಐವರಿಗೆ ಶಿಕ್ಷೆ… ಟ್ರಂಪ್ ಆದೇಶ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








