ಥಿಯೇಟರ್ ಗಳಲ್ಲಿ ದೂಳೇಬ್ಬಿಸಿದ ಸೂರ್ಯವಂಶಿ
ಸಾಮಾನ್ಯವಾಗಿ ಸ್ಟಾರ್ ನಟರರ ಸಿನಿಮಾಗಳಿಗೆ ಮೊದಲ ದಿನ ಮುಂಜಾನೆ ಷೋ ಏರ್ಪಡಿಸುತ್ತಾರೆ. ಕೆಲವೊಮ್ಮೆ ಮಧ್ಯರಾತ್ರಿಯೂ ಇರುತ್ತದೆ ಆದರೆ ಚಿತ್ರ ಬಿಡುಗಡೆ ಆದ ನಾಲ್ಕು ದಿನದ ನಂತರ ದಿನದ 24 ಗಂಟೆಯೂ ಷೊ ಏರ್ಪಡಿಸಕೊಳ್ಳುತ್ತಿದೆ ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ.
ಕೆಲವು ಚಿತ್ರಮಂದಿರಗಳಲ್ಲಿ ರಾತ್ರಿ 11.45ಕ್ಕೆ ಹೆಚ್ಚುವರಿ ಶೋ ಏರ್ಪಡಿಸಲಾಗಿದೆ. ಅದೂ ಸಾಲದೆಂಬಂತೆ ಮಧ್ಯರಾತ್ರಿ 12.30, 2 ಗಂಟೆ, ನಸುಕಿನ 4.30, 5.30 ಹಾಗೂ ಮುಂಜಾನೆ 6 ಗಂಟೆಗೆ ‘ಸೂರ್ಯವಂಶಿ’ ಪ್ರದರ್ಶನ ನಡೆಸಲಾಗಿದೆ. ಈ ಪರಿ ಕ್ರೇಜ್ ಕಂಡು ಎಲ್ಲರೂ ಬೆರಗಾಗಿದ್ದಾರೆ. ಭಾರಿ ಉತ್ಸಾಹದಿಂದ ಸಿನಿಮಾ ನೋಡಲು ಬಂದಿರುವ ಅಭಿಮಾನಿಗಳು ಟಿಕೆಟ್ ಸಿಗದೇ ಹಿಂದಿರುಗಬಾರದು ಎಂಬ ಕಾರಣಕ್ಕೆ ಚಿತ್ರಮಂದಿರಗಳ ಮಾಲೀಕರು ಹೆಚ್ಚಿನ ಶೋ ವ್ಯವಸ್ಥೆ ಮಾಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾವು 2020ರ ಆರಂಭದಲ್ಲೇ ತೆರೆಗೆ ಬರಬೇಕಿತ್ತು. ಕೋವಿಡ್ ಕಾರಣದಿಂದಾಗಿ ಒಂದೂವರೆ ವರ್ಷಗಳ ನಂತರ ರಿಲೀಸ್ ಆಗುತ್ತಿದೆ. ಆದರೂ ಕೂಡ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲಲು ಸಫಲವಾಗಿದೆ. ಶುಕ್ರವಾರ (ನ.5) ತೆರೆಕಂಡ ಈ ಸಿನಿಮಾ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸಿಕೊಂಡು ಥಿಯೇಟರ್ ಗಳಲ್ಲಿ ಮುನ್ನುಗ್ಗುತ್ತಿದೆ.
ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್‌ಗೆ ನಾಯಕಿಯಾಗಿ ಕತ್ರಿನಾ ಕೈಫ್ ನಟಿಸಿದ್ದಾರೆ. ಅಜಯ್ ದೇವ್‌ಗನ್ ಮತ್ತು ರಣ್‌ವೀರ್ ಸಿಂಗ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.