Soudi Arabia : ಅಪ್ಪಿ ತಪ್ಪಿಯೂ ಹಾರ್ಟ್ ಇಮೋಜಿ ಕಳುಹಿಸಿದ್ರೆ 20 ಲಕ್ಷ ದಂಡ ಕಟ್ಟಬೇಕು…
ವಿಚಿತ್ರ ಕಾನೂನುಗಳು ಜೊತೆಗೆ ಹಕ್ಕು ಕಸೆದುಕೊಂಡಿರುವಂತಹ ಕಾನೂನುಗಳು ಇರುವ ದೇಶಗಳೆಂದ್ರೆ ಇತ್ತೀಚೆಗಿನ ಬೆಳವಣಿಗಳನ್ನ ನೋಡಿದರೆ ಮೊದಲಿಗೆ ಅಫ್ಗಾನಿಸ್ತಾನ ನೆನಪಾಗುತ್ತದೆ… ಬಿಟ್ರೆ ಸೌದಿ ಅರೇಬಿಯಾ, ನಾರ್ತ್ ಕೊರಿಯಾದಂತಹ ದೇಶಗಳು ತಲೆಗೆ ಬರುತ್ತವೆ…
ಆದ್ರೆ ಇದೀಗ ತೀರ ವಿಚಿತ್ರ ಎನಿಸುವಂತಹ ಕಾನೂನನ್ನ ಜಾರಿಗೆ ತಂದಿದೆ ಸೌದಿ ಅರೇಬಿಯಾ… ಅದೇನೆಂದ್ರೆ ವಾಟ್ಸಪ್, ಮೆಸೆಂಜರ್ ಆ್ಯಪ್‍ನಲ್ಲಿ ಹಾರ್ಟ್ ಇಮೋಜಿಗಳನ್ನು ಕಳುಹಿಸಿದರೆ ಜೈಲು ಶಿಕ್ಷೆಗೆ ಗುರಿಡಿಸಲಾಗುತ್ತದೆ… ಜೊತೆಗೆ 20 ಲಕ್ಷ ವಿಧಿಸಬೇಕಾಗುತ್ತದೆ.. ಇಂತಹ ಹೊಸ ಕಾನೂನನ್ನ ಅಲ್ಲಿ ತರಲಾಗಿದೆ.
ಯಾರಿಗಾದರೂ ಕೆಂಪು ಬಣ್ಣದ ಹಾರ್ಟ್ ಇಮೋಜಿ ಕಳುಹಿಸಿ ತಪ್ಪಿತಸ್ಥರೆಂದು ಸಾಬೀತಾದರೆ 2ರಿಂದ 5 ವರ್ಷಗಳ ಕಾಲ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಕಳುಹಿಸುವವರಿಗೆ 20 ಲಕ್ಷ ದಂಡವನ್ನು ವಿಧಿಸಬಹುದಾಗಿದೆ. ಸೌದಿ ಅರೇಬಿಯಾದ ಆ್ಯಂಟಿ ಫ್ರಾಡ್ ಅಸೋಸಿಯೇಶನ್ ಈ ಕುರಿತು ಆದೇಶ ಹೊರಡಿಸಿದೆ.









