Soundarya
ಇತ್ತೀಚೆಗೆ ಟಾಲಿವುಡ್ ನಲ್ಲಿ ಒಂದಾದ ಬಳಿಕ ಒಂದು ಬಯೋಪಿಕ್ ಸಿನಿಮಾಗಳು ತಯಾರಾಗುತ್ತಿವೆ.
ಜಯಲಲಿತಾ, ಪುಲ್ಲೇಲ ಗೋಪಿಚಂದ್, ಕರಣಂ ಮಲ್ಲೇಶ್ವರಿ ಹೀಗೆ ಹಲವರ ಬಯೋಪಿಕ್ ಗೆ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಸೌಂದರ್ಯ (Soundarya) ಅವರ ಬಯೋಪಿಕ್ ಗೆ ತಯಾರಿ ನಡೆಯುತ್ತಿದೆ.
ಮೂಲಗಳ ಪ್ರಕಾರ ತೆಲುಗು ನಿರ್ಮಾಪಕರೊಬ್ಬರು ಸೌಂದರ್ಯ ಬಯೋಪಿಕ್ ನಿರ್ಮಾಣ ಮಾಡಲು ಸೌಂದರ್ಯ ಕುಟುಂಬದ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪ್ರತಿಮ ಸೌಂದರ್ಯವತಿ ಮತ್ತು ಅದ್ಭುತ ನಟಿ ಸೌಂದರ್ಯ ಬಯೋಪಿಕ್ ಬರುತ್ತಿದೆ ಎಂಬ ಸುದ್ದಿ ಇಂದು ನಿನ್ನೆಯದ್ದಲ್ಲ.
ಹಲವು ಬಾರಿ ಅವರ ಬಯೋಪಿಕ್ ಮಾಡಲು ಅನೇಕ ನಿರ್ಮಾಪಕರು ಪ್ರಯತ್ನಿಸಿದ್ದರುವ ಎಂಬ ಸುದ್ದಿ ಬಿತ್ತರವಾಗಿತ್ತು. ಆದರೆ ಅದೆಲ್ಲ ಹುಸಿಯಾಗಿತ್ತು.
ಇದೀಗ ಇದೀಗ ಮತ್ತೆ ಸಂದೌರ್ಯ ಬಯೋಪಿಕ್ ನಿರ್ಮಾಣಕ್ಕೆ ನಿರ್ಮಾಕರು ಮುಂದಾಗಿದ್ದಾರೆ ಎನ್ನಲಾಗಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಇನ್ನೂ ದಕ್ಷಿಣ ಭಾರತ ಖ್ಯಾತ ನಟಿ ಸಾಯಿ ಪಲ್ಲವಿ ಅವರು ಸೌಂದರ್ಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂಬ ಗುಮಾನಿ ಕೂಡ ಹಬ್ಬಿದೆ.
ಈಗಾಗಲೇ ಸಾಯಿ ಪಲ್ಲವಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ.
ಬಯೋಪಿಕ್ ನಲ್ಲಿ ನಟಿಸಲು ಸಾಯಿ ಪಲ್ಲವಿ ಸಹ ಆಸಕ್ತರಾಗಿದ್ದು, ಸದ್ಯದಲ್ಲೇ ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂದು ಸಹ ಕೆಲ ಮೂಲಗಳು ತಿಳಿಸಿವೆ.
90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ನಟಿ ಸೌಂದರ್ಯ.
ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿ ಯಶಸ್ಸಿನ ಶಿಖರಕ್ಕೇರಿದ್ದ ಸೌಂದರ್ಯ 2004ರಲ್ಲಿ ವಿಮಾನ ದುರಂತದಲ್ಲಿ ಅಕಾಲಿಕ ಮರಣಹೊಂದಿದ್ದರು.
‘ಯುವರತ್ನ’ ಚಿತ್ರೀಕರಣ ಮುಕ್ತಾಯ: ‘ಪವರ್ ಸ್ಟಾರ್’ ಎಂಟ್ರಿಗೆ ಅಭಿಮಾನಿಗಳು ರೆಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








