ಬೆಂಗಳೂರಿನ ಸೌಂದರ್ಯ ಬಡಾವಣೆ ಸೌಂದರ್ಯ ವಿನಾಯಕ ಸೇವಾ ಸಮಿತಿಯ ವತಿಯಿಂದ ಅದ್ದೂರಿಯಾಗಿ ಏಳನೇ ವರ್ಷದ ಗಣೇಶೋತ್ಸವ ನೆನ್ನೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಎಲ್ಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಗಿತ್ತು. ಬಳಿಕ, ಗಣೇಶನ ಬೀಳ್ಕೊಡುಗೆ ಸಮಾರಂಭದಲ್ಲಿ ಸೌಂದರ್ಯ ವಿನಾಯಕ ಸೇವಾ ಸಮಿತಿಯ ಅಧ್ಯಕ್ಷರು ರವಿಕುಮಾರ್ ಹಾಗು ಎಂ.ಬಿ ಮೂರ್ತಿ ಸೌಂದರ್ಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು , ಸಂಘದ ಸದಸ್ಯರು ಮತ್ತು ಬಡಾವಣೆಯ ನಿವಾಸಿಗಳು ಬಾಗಿಯಾಗಿದ್ದರು.