ದಾದಾ ಮಾತು ಕೇಳದೇ ಕೈ ಸುಟ್ಟುಕೊಂಡ್ರಾ ಕೊಹ್ಲಿ virat-kohli saaksha tv
ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ವಜಾಗೊಳಿಸಿ ರೋಹಿತ್ ಶರ್ಮಾ ಅವರನ್ನು ಆ ಸ್ಥಾನಕ್ಕೆ ನೇಮಿಸಿ ಬಿಸಿಸಿಐ ಟ್ವೀಟ್ ಮಾಡಿದೆ. ವಿರಾಟ್ ಅವರನ್ನು ನಾಯಕತ್ವದಿಂದ ವಜಾಗೊಳಿಸುವ ವಿಷಯವನ್ನು ಕೇವಲ ಒಂದು ವಾಕ್ಯದಲ್ಲಿ ತಿಳಿಸಿದ್ದ ಇದೀಗ ಆ ಬಗ್ಗೆ ವಿವರಣೆ ನೀಡಲಾರಂಭಿಸಿದೆ
ಅತ್ಯುತ್ತಮ ರೆಕಾರ್ಡ್ ಹೊಂದಿರುವ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಸಿದ ಬಗ್ಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಕೊಹ್ಲಿ ಟ್ವೆಂಟಿ-20 ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದಾಗ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲು ಆಯ್ಕೆಗಾರರು ನಿರ್ಧರಿಸಿದ್ದರು ಎಂದು ಗಂಗೂಲಿ ಬಹಿರಂಗಪಡಿಸಿದ್ದಾರೆ. ಎರಡು ಸೀಮಿತ ಓವರ್‌ಗಳ ಮಾದರಿಗಳಿಗೆ ಇಬ್ಬರು ವಿಭಿನ್ನ ನಾಯಕರನ್ನು ಹೊಂದಿರುವುದು ಭಾರತದಂತಹ ತಂಡಕ್ಕೆ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟ್ವೆಂಟಿ-20 ನಾಯಕತ್ವಕ್ಕೆ ರಾಜೀನಾಮೆ ನೀಡದಂತೆ ನಾವು ಕೊಹ್ಲಿಯನ್ನು ಕೇಳಿದ್ದೇವು. ಆದರೆ ಅವರು ನಮ್ಮ ಮಾತನ್ನು ನಿರ್ಲಕ್ಷಿಸಿದರು. ಹೀಗಾಗಿ ನಾವು ರೋಹಿತ್ ಶರ್ಮಾ ಅವರನ್ನ ವೈಟ್ ಬಾಲ್ ನಾಯಕರನ್ನಾಗಿ ಮಾಡಲಾಗಿದೆ . ಇನ್ನು ಏಕದಿನದಲ್ಲಿ ಕೊಹ್ಲಿ ನಾಯಕತ್ವದ ದಾಖಲೆ ಉತ್ತಮವಾಗಿದೆ ಎಂಬುದು ಸತ್ಯ. ಆ ಅಂಶವನ್ನೂ ಪರಿಶೀಲಿಸಲಾಗಿದೆ ಎಂದು ದಾದಾ ತಿಳಿಸಿದ್ದಾರೆ.
ಆದಾಗ್ಯೂ, ರೋಹಿತ್ ನಾಯಕತ್ವ ವಹಿಸಿದ್ದ ಕೆಲವು ಪಂದ್ಯಗಳಲ್ಲಿ ತಮ್ಮನ್ನ ಸಾಬೀತುಪಡಿಸಿಕೊಂಡಿದ್ದಾರೆ.ಅಲ್ಲದೆ ಮುಂದೆಯೂ ನಾಯಕನಾಗಿ ಮಿಂಚುತ್ತಾರೆ ಎಂದು ಭಾವಿಸುತ್ತೇವೆ.
ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಸ್ವತಃ ನಾನು ಮತ್ತು ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಕೊಹ್ಲಿಗೆ ತಿಳಿಸಿದ್ದೇವೆ. ಅವರೂ ನಮ್ಮ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಗಂಗೂಲಿ ಹೇಳಿದ್ದಾರೆ.









