ADVERTISEMENT
Thursday, March 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ತಪ್ಪು ನನ್ನದಲ್ಲ… ಕೆಕೆಆರ್ ಮ್ಯಾನೇಜ್‍ಮೆಂಟ್‍ನದ್ದು… 12 ವರ್ಷಗಳ ಬಳಿಕ ಗಂಗೂಲಿ ಹೇಳಿದ್ದೇನು ?

admin by admin
July 10, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ತಪ್ಪು ನನ್ನದಲ್ಲ… ಕೆಕೆಆರ್ ಮ್ಯಾನೇಜ್‍ಮೆಂಟ್‍ನದ್ದು… 12 ವರ್ಷಗಳ ಬಳಿಕ ಗಂಗೂಲಿ ಹೇಳಿದ್ದೇನು ?

2008ರ ಐಪಿಎಲ್… ಅದು ಚೊಚ್ಚಲ ಐಪಿಎಲ್ ಟೂರ್ನಿ. ಆ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದವರು ಸೌರವ್ ಗಂಗೂಲಿ. ತವರಿನ ತಂಡದ ನಾಯಕನಾಗಿದ್ದ ಸೌರವ್ ಗಂಗೂಲಿಯ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಕೊಲ್ಕತ್ತಾದ ಮಹಾರಾಜ ಖ್ಯಾತಿಯ ಗಂಗೂಲಿಗೆ ತವರು ಅಭಿಮಾನಿಗಳ ಬೆಂಬಲವೂ ಇತ್ತು. ಆದ್ರೆ ಗಂಗೂಲಿ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಅಂದುಕೊಂಡಂತೆ ಕೆಕೆಆರ್ ತಂಡ ಮೊದಲ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.
ಇದೀಗ ಗಂಗೂಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕೆಕೆಆರ್ ತಂಡ ಆರಂಭದ ಮೂರು ಋತುಗಳಲ್ಲಿ ಯಾಕೆ ಕಳಪೆ ಪ್ರದರ್ಶನ ನೀಡಿತ್ತು ಎಂಬುದನ್ನು ಹೇಳಿದ್ದಾರೆ. ಗಂಗೂಲಿ ಹೇಳುವ ಪ್ರಕಾರ ತಂಡದ ಕಳಪೆ ನಿರ್ವಹಣೆಗೆ ಮುಖ್ಯ ಕಾರಣ ಟೀಮ್ ಮ್ಯಾನೇಜ್‍ಮೆಂಟ್. ಅದ್ರಲ್ಲೂ ಆಸ್ಟ್ರೇಲಿಯಾದ ಕೋಚ್ ಆಗಿದ್ದ ಜಾನ್ ಬುಕನನ್. ಜಾನ್ ಬುಕನನ್ ಅವರು ಬಹು ನಾಯಕತ್ವದ ಪದ್ಧತಿಯಿಂದಾಗಿ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಎರಡು ವರ್ಷಗಳ ಕಾಲ ಕೆಕೆಆರ್ ತಂಡ ಕೋಚ್ ಆಗಿ ಜಾನ್ ಬುಕನನ್ ಕಾರ್ಯನಿರ್ವಹಿಸಿದ್ದರು. ಆದಾದ ನಂತರ ಅವರನ್ನು ಕೆಕೆಆರ್ ವಜಾಗೊಳಿಸಿತ್ತು. ಆ ನಂತರ ಮತ್ತೆ ಸೌರವ್ ಗಂಗೂಲಿ ತಂಡದ ನಾಯಕತ್ವ ವಹಿಸಿದ್ದರು. ಆದ್ರೆ ಗಂಗೂಲಿಗೆ ಕೆಕೆಆರ್ ಟೀಮ್ ಮ್ಯಾನೇಜ್‍ಮೆಂಟ್ ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡಿರಲಿಲ್ಲ.
ನನಗೆ ಕೆಕೆಆರ್ ಟೀಮ್ ಮ್ಯಾನೇಜ್‍ಮೆಂಟ್ ಸಂಪೂರ್ಣ ಸ್ವಾತಂತ್ರ್ಯ ನೀಡಿರಲಿಲ್ಲ. ನಾನು ಟೀಮ್ ಮ್ಯಾನೇಜ್‍ಮೆಂಟ್ ಬಳಿ ಮೊದಲೇ ಹೇಳಿದ್ದೆ. ತಂಡವನ್ನು ಕಟ್ಟುವುದು ಮತ್ತು ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನನಗೆ ಬಿಟ್ಟು ಬಿಡಿ ಎಂದು. ಆದ್ರೆ ಕೆಕೆಆರ್ ಟೀಮ್ ಮ್ಯಾನೇಜ್‍ಮೆಂಟ್ ಅಂತಹ ಸ್ವಾತಂತ್ರ್ಯವನ್ನು ನೀಡಲಿಲ್ಲ. ಬದಲಾಗಿ ತಂಡದಲ್ಲಿ ನಾಲ್ವರು ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದರು. ಇದು ತಂಡದ ಒಟ್ಟಾರೆ ನಿರ್ವಹಣೆಯ ಮೇಲೆ ಪರಿಣಾಮ ಬೀರಿತ್ತು ಎಂದು ದಾದಾ ಹೇಳಿದ್ದಾರೆ.
ಗಂಗೂಲಿ ನಂತರ ಕೆಕೆಆರ್ ತಂಡದ ಸಾರಥಿಯಾಗಿ 20011ರಲ್ಲಿ ಗೌತಮ್ ಗಂಭೀರ್ ಆಯ್ಕೆಯಾದ್ರು. ಗಂಭೀರ್ ನೇತೃತ್ವದಲ್ಲಿ ಕೆಕೆಆರ್ ತಂಡ 2012 ಮತ್ತು 2014ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಗ ಗಂಭೀರ್ ಅವರಿಗೆ ಪೂರ್ತಿ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಈ ವಿಚಾರವನ್ನು ಗಂಭೀರ್ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಶಾರೂಕ್ ಖಾನ್ ಇಡೀ ತಂಡದ ನಿರ್ವಹಣೆಯನ್ನು ಬಿಟ್ಟುಕೊಟ್ಟಿದ್ದರು. ಇದು ನಿನ್ನ ತಂಡ. ನಾನು ಇದರಲ್ಲಿ ಯಾವುದೇ ಕಾರಣಕ್ಕೂ ಭಾಗಿಯಾಗುವುದಿಲ್ಲ. ಇದೇ ಮಾತನ್ನು ಶಾರೂಕ್ ಬಳಿ ನಾನು ಹೇಳಿದ್ದೆ. ಆದ್ರೆ ನನಗೆ ಅವರು ಅವಕಾಶವನ್ನು ನೀಡಲಿಲ್ಲ. ಇದ್ರಲ್ಲಿ ನನ್ನ ತಪ್ಪು ಏನು ಇಲ್ಲ. ಟೀಮ್ ಮ್ಯಾನೇಜ್‍ಮೆಂಟಿನದ್ದು. ಅದ್ರಲ್ಲೂ ಕೋಚ್ ಜಾನ್ ಬುಕನನ್ ಅವರದ್ದು ಎಂದು ಗಂಗೂಲಿ ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಲ್ಲದೆ ಮೊದಲ ಮೂರು ಋತುಗಳಲ್ಲಿ ಕೆಕೆಆರ್ ಟೀಮ್ ಮ್ಯಾನೇಜ್ ಮೆಂಟ್ ಮಾಡಿರುವ ತಪ್ಪುಗಳನ್ನು ಅನಾವರಣಗೊಳಿಸಿದ್ರು.
ಕೆಕೆಆರ್ ತಂಡದ ಪರ ಮೂರು ವರ್ಷ ಆಡಿದ್ದ ನಂತರ ಗಂಗೂಲಿ ಪುಣೆ ವಾರಿಯರ್ಸ್ ತಂಡವನ್ನು ಸೇರಿಕೊಂಡ್ರು. 2012ರಲ್ಲಿ ಗಂಗೂಲಿ ಐಪಿಎಲ್‍ಗೂ ನಿವೃತ್ತಿ ಹೇಳಿದ್ರು. ಸದ್ಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿದ್ದಾರೆ. ಹಾಗೇ ಬಿಸಿಸಿಐ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

March 4, 2026
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026
Tags: goutham gambirIPLipl 2008ipl 2009ipl 2010ipl 2011ipl 2012ipl 2014kkrKKR’s Australian coach John BuchananKolkata Knight Riderssharukh khan
ShareTweetSendShare
Join us on:

Related Posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

by admin
March 4, 2026
0

ಜಾಮ್‌ನಗರ - ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು...

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram