Sourav Ganguly | ಟೈಗರ್ ಗೆ ದಾದಾ ಸಪೋರ್ಟ್
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ ಆಸಕ್ತಿದಾಯಕ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಫಾರ್ಮ್ ಕೊರತೆಯಿಂದ ಬಳಲುತ್ತಿರುವ ಕೊಹ್ಲಿಗೆ ದಾದಾ ಬೆಂಬಲವಾಗಿ ನಿಂತಿದ್ದಾರೆ.
ಕೊಹ್ಲಿ ಅದ್ಭುತ ಆಟಗಾರ, ಅದಕ್ಕೆ ಅವರು ಸಾಧಿಸಿರುವ ರನ್ ಗಳೇ ಸಾಕ್ಷಿ. ಏಷ್ಯಾಕಪ್ ನಲ್ಲಿ ಅವರು ಮತ್ತೆ ಮೊದಲಿನ ಫಾರ್ಮ್ ಗೆ ಮರಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ತನ್ನ ಫಾರ್ಮ್ ಗಾಗಿ ಕಠೋರವಾಗಿ ಶ್ರಮಿಸುತ್ತಾನೆಂದು, ಆತನಿಗೆ ಸೆಟ್ ಆಗುವ ಅವಕಾಶಗಳು ಕಲ್ಪಿಸಿದ್ರೆ ಮತ್ತೆ ಮೊದಲಿನ ವಿರಾಟ್ ಕೊಹ್ಲಿಯನ್ನ ನಾವು ನೋಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ಸೆಂಚೂರಿ ಮಾತ್ರ ಸಾಧಿಸಿಲ್ಲ. ಆದ್ರೆ ತಂಡಕ್ಕೆ ಉಪಯೋಗವಾಗುವ ರನ್ ಗಳನ್ನು ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ ಗಂಗೂಲಿ, ಐಸಿಸಿ ಚೀಫ್ ಪದವಿ ರೇಸ್ ನಲ್ಲಿ ನಾನಿಲ್ಲ. ಬಿಸಿಸಿಐ, ಕೇಂದ್ರ ಸರ್ಕಾರದ ನಿರ್ಧಾರವೇ ಈ ವಿಚಾರದಲ್ಲಿ ಫೈನಲ್ ಎಂದು ಸ್ಪಷ್ಟಪಡಿಸಿದ್ದಾರೆ.