ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಎಬೊಲಾ ರೀತಿಯ ಮಾರ್ಬರ್ಗ್ ವೈರಸ್ ಕಾಯಿಲೆಯ ಎರಡು ಶಂಕಿತ ಪ್ರಕರಣಗಳು ವರದಿಯಾಗಿದೆ.. ಪಶ್ಚಿಮ ಆಫ್ರಿಕಾದಲ್ಲಿ ಮೊದಲ ಬಾರಿಗೆ ಈ ರೀತಿಯ ಸೋಂಕು ಪತ್ತೆಯಾದಂತಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ( WHO) ಮಾಹಿತಿ ನೀಡಿದೆ..
ಘಾನಾದ ದಕ್ಷಿಣ ಪ್ರದೇಶದಲ್ಲಿ ಮೃತಪಟ್ಟ ಇಬ್ಬರು ರೋಗಿಗಳಿಂದ ತೆಗೆದ ಮಾದರಿಗಳ ಪ್ರಾಥಮಿಕ ವಿಶ್ಲೇಷಣೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎನ್ನಲಾಗಿದೆ.. ಅವುಗಳ ದೃಢೀಕರಣಕ್ಕಾಗಿ WHO ಜೊತೆಗೆ ಕಾರ್ಯನಿರ್ವಹಿಸುವ ಸೆನೆಗಲ್ನ ಪಾಶ್ಚರ್ ಇನ್ಸ್ಟಿಟ್ಯೂಟ್ಗೆ ರವಾನಿಸಲಾಗಿದೆ.
ಪ್ರಾಥಮಿಕ ವರದಿ ಪ್ರಕಾರ ಜ್ವರ, ವಾಂತಿ, ಅತಿಸಾರದಂತಹ ಲಕ್ಷಣಗಳು ಈ ರೋಗದಲ್ಲಿ ಕಂಡುಬಂದಿದೆ ಎನ್ನಲಾಗಿದೆ..