ಖಾಸಗಿ ಪೋಟೋ ಲೀಕ್ – ಪೊಲೀಸ್ ಠಾಣೆ ಮೆಟ್ಟಿಲೇರಿದ ಅಮಲಾ ಪೌಲ್
ತನ್ನ ಅನುಮತಿ ಇಲ್ಲದೆ ತನ್ನ ಖಾಸಗಿ ಪೋಟೋಗಳನ್ನ ವೈರಲ್ ಮಾಡಲಾಗಿದೆ ಎಂದು ಕಾಲಿವುಡ್ ನಟಿ ಅಮಲಾ ಪೌಲ್ ತನ್ನ ಪ್ರಿಯಕರನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುದೀಪ್ ಅಭಿನಯುದ ಹೆಬ್ಬುಲಿ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾಗಿರುವ ನಟಿ ಅಮಲಾ ಪೌಲ್ ಆಕೆಯ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೋರಿಸಿದ್ದಾರೆ. ಈ ದೂರನ್ನು ಆಧರಿಸಿದ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಅಮಲಾ ಅವರು 2014ರಲ್ಲಿ ನಿರ್ದೇಶಕ ಎ.ಎಲ್. ವಿಜಯ್ ಅವರನ್ನು ಮದುವೆ ಆದರು. ಆದರೆ, ಇವರ ನಡುವೆ ಹೊಂದಾಣಿಕೆ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಇಬ್ಬರೂ 2017ರಲ್ಲಿ ವಿಚ್ಛೇದನ ಪಡೆದುಕೊಂಡರು. ಆನಂತರ ಭವಿಂದರ್ ಸಿಂಗ್ ಸಾಂಗತ್ಯ ಬಯಸಿದ್ದರು. ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ಬಂಡವಾಳ ಕೂಡ ಹೂಡಿದ್ದರು. ಆನಂತರ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಒಬ್ಬರಿಗೊಬ್ಬರು ದೂರವಾಗಿದ್ದರು.
ಖಾಸಗಿ ವಿಡಿಯೋ ಇದೆ ಎಂದು ಹಣದ ಬೇಡಿಕೆ ಇಟ್ಟಿದ್ದಾನೆ ಎಂದು ಅಮಲಾ ದೂರಿನಲ್ಲಿ ಬರೆದಿದ್ದು, ತಾನು ಹೇಳಿದಂತೆ ಕೇಳಬೇಕು ಎಂದು ಹಿಂಸೆ ನೀಡುತ್ತಿರುವುದಾಗಿ ತಮಿಳುನಾಡಿನ ವಿಲ್ಲುಪುರಂ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಮಲಾ ದಾಖಲಿಸಿದ್ದಾರೆ. ಮದುವೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಅಮಲಾ ‘ನಾನು ಮದುವೆ ಆಗಿಲ್ಲ. ಆ ಥೀಮ್ನಲ್ಲಿ ನಾವು ಫೋಟೋಶೂಟ್ ಮಾಡಿಸಿದ್ದೆವು ಅಷ್ಟೇ’ ಎಂಬುದಾಗಿ ಅವರು ಹೇಳಿದ್ದರು.








