ಟ್ರಂಪ್ ಆಡಳಿತದ ವೈಫಲ್ಯಗಳಿಂದ ಜೋ ಬೈಡನ್ ಪಾಠ ಕಲಿಯಲಿ : ಮೂನ್
ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಅವರು ಅಮೆರಿಕಾದ ಚುನಾಯಿತ ಅಧ್ಯಕ್ಷರಾದ ಜೋ ಬೈಡೆನ್ ಅವರಿಗೆ ಮಹತ್ವದ ಸಲಹೆಯೊಂದನ್ನ ನೀಡಿದ್ದಾರೆ. ಅಮೆರಿಕ ಮತ್ತು ಉತ್ತರ ಕೊರಿಯಾದ ರಾಜತಾಂತ್ರಿಕ ಸಂಬಂಧದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಅನುಭವಿಸಿದ ವೈಫಲ್ಯಗಳಿಂದ ಪಾಠ ಕಲಿತು, ಮುಂದಿನ ಹೆಜ್ಜೆ ಇಡುವಂತೆ ಜೋ ಬೈಡನ್ ಅವರಿಗೆ ತಿಳಿಸಿದ್ದಾರೆ.
ಉತ್ತರ ಕೊರಿಯಾದ ನಾಯಕ ಅಧ್ಯಕ್ಷ ಕಿಮ್ ಜೊಂಗ್ ಉನ್ ಮತ್ತು ಟ್ರಂಪ್ ಅವರ ನಡುವೆ ಮೂರು ಶೃಂಗಸಭೆಗಳನ್ನು ಆಯೋಜಿಸಲು ಮೂನ್ ಜೆ ಇನ್ ತೀವ್ರ ಲಾಬಿ ಮಾಡಿದ್ದರು. ಆದರೆ ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ನಡೆದ ‘ಪರಮಾಣು ನಿಶಸ್ತ್ರೀಕರಣ’ ಕುರಿತ ಮಾತುಕತೆ ಯಶಸ್ವಿಯಾಗದ ಕಾರಣ, ಈ ರಾಷ್ಟ್ರಗಳ ನಡುವೆ ರಾಜತಾಂತ್ರಿಕತೆ ಸ್ಥಗಿತಗೊಂಡಿತು. ಇದೇ ವೇಳೆ ಇಂಥ ವಿಚಾರಗಳಲ್ಲಿ ಟ್ರಂಪ್ ಗಿಂತ ಬೈಡನ್ ಭಿನ್ನ ವಿಧಾನವನ್ನು ಅನುಸರಿಸುವ ಸಾಧ್ಯತೆ ಇದೆ ಎಂದು ಮೂನ್ ಒಪ್ಪಿಕೊಂಡರು.
ಭಾರತದ ಕೆಲ ಕಾನೂನುಗಳ ವಿರುದ್ಧ ಬ್ರಿಟನ್ ನಲ್ಲಿ ಪ್ರತಿಭಟನೆ
ಮದುವೆ ಆಸೆ ತೋರಿಸಿ ಕಾಗೆ ಹಾರಿಸಿದಳು ಸುಂದರಿ : ಪ್ರೀತಿ ನಂಬಿ ಪಾಪರ್ ಆದ ಯುವಕ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








