ಅನಿಲ್ ಕುಂಬ್ಳೆ ದಾಖಲೆ ಮುರಿದ ಸೌಥಿ southee saaksha tv
ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಟೀಂ ಇಂಡಿಯಾಕ್ಕೆ ಕಬ್ಬಿಣದ ಕಡಲೆಯಾಗಿದ್ದಾರೆ.
ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಕಬಳಿಸಿರುವ ಸೌಥಿ ಎರಡನೇ ಇನ್ನಿಂಗ್ಸ್ ನಲ್ಲಿ ಮೂರು ವಿಕೆಟ್ ಪಡೆದಿದ್ದಾರೆ.
ಇದರೊಂದಿಗೆ ಸೌಥಿ ಟೆಸ್ಟ್ ಕ್ರಿಕೆಟ್ ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಸೌಥಿ ಭಾರತದ ವಿರುದ್ಧ ಇದುವರೆಗೆ 10 ಟೆಸ್ಟ್ ಪಂದ್ಯಗಳಲ್ಲಿ 51 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಟೀಂ ಇಂಡಿಯಾದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಕಿವೀಸ್ ಬೌಲರ್ ಎನಿಸಿಕೊಂಡಿದ್ದಾರೆ. ರಿಚರ್ಡ್ ಹಡ್ಲಿ ಭಾರತದ ವಿರುದ್ಧ 14 ಟೆಸ್ಟ್‍ಗಳಲ್ಲಿ 65 ವಿಕೆಟ್‍ಗಳನ್ನು ಪಡೆದಿದ್ದಾರೆ.
ಒಟ್ಟಾರೆ ಇಂಡೋ ಕಿವೀಸ್ ಟೆಸ್ಟ್ ಸರಣಿಗಳನ್ನು ತೆಗೆದುಕೊಂಡದೇ ಸೌಥಿ, ಟೀಂ ಇಂಡಿಯಾದ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಕೂಡ ಮುರಿದಿದ್ದಾರೆ.
ಕುಂಬ್ಳೆ ನ್ಯೂಜಿಲೆಂಡ್ ವಿರುದ್ಧ 50 ವಿಕೆಟ್ ಕಬಳಿಸಿದ್ದರು. ಸೌಥಿ ಭಾರತದ ವಿರುದ್ಧ 51 ವಿಕೆಟ್ ಪಡೆದಿದ್ದಾರೆ.
ಇನ್ನುಳಿದಂತೆ ರಿಚರ್ಡ್ ಹಡ್ಲಿ (65 ವಿಕೆಟ್) ಅಗ್ರಸ್ಥಾನದಲ್ಲಿದ್ದರೆ, ಬಿಶನ್ ಸಿಂಗ್ ಬೇಡಿ (57 ವಿಕೆಟ್), ಪ್ರಸನ್ನ (55 ವಿಕೆಟ್), ರವಿಚಂದ್ರನ್ ಅಶ್ವಿನ್ (55 ವಿಕೆಟ್) ಮತ್ತು ಸೌಥಿ (51 ವಿಕೆಟ್) ನಂತರದ ಸ್ಥಾನದಲ್ಲಿದ್ದಾರೆ. ಸೌಥಿ ಏಷ್ಯನ್ ನೆಲದಲ್ಲಿ 12 ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದಾರೆ.









