ಸಿಎಂ ಮಮತಾ ಬ್ಯಾನರ್ಜಿಗಾಗಿ ದಾರಿ ಮಾಡಿಕೊಟ್ಟ ಸೊವಾಂದೇಬ್
ಪಶ್ಚಿಮ ಬಂಗಾಳ : ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಟಿಎಂಸಿ ನಾಯಕ ಸೊವಾಂದೇವ್ ಚಟ್ಟೋಪಾಧ್ಯಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಸಿಎಂ ಮಮತಾ ಬ್ಯಾನರ್ಜಿ ಈ ಸ್ಥಾನದಿಂದ ಸ್ಪರ್ಧಿಸಲಿದ್ದಾರಂತೆ. ವಿಧಾನಸಭಾ ಚುನಾವಣೆಯಲ್ಲಿ ಮಮತಾ ನಂದಿಗ್ರಾಮ್ ನಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋತು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಹೀಗಾಗಿ ಮಮತಾ ಬ್ಯಾನರ್ಜಿ 6 ತಿಂಗಳ ಒಳಗಾಗಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ನಿಂತು ಆರಿಸಿಬರಬೇಕಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಪರ್ಧೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೊವಾಂದೇಬ್ ಚಟರ್ಜಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಮತಾ ಸ್ಪರ್ಧೆಗೆ ಹಾaದಿ ಸುಗಮಗೊಳಿಸಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಅವರು ಬಂಗಾಳ ವಿಧಾನಮಂಡಲದಲ್ಲಿ ವಿಧಾನ ಪರಿಷತ್ ರಚನೆಗೆ ಮಸೂದೆ ಅಂಗೀಕರಿಸಲಾಗಿದೆ. ಈ ಮೂಲಕ ಮಮತಾ ಬ್ಯಾನರ್ಜಿ ವಿಧಾನ ಪರಿಷತ್ ಗೆ ಸ್ಪರ್ಧಿಸಿ ಗೆಲ್ಲುವ ಯೋಚನೆ ಸಹ ಮಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.









