ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೋಟ್ಯಾಂತರ ಅಭಿಮಾನಿಗಳಿಗೆ ವಿದಾಯ ಹೇಳಿ ಬಾರದೂರಿಗೆ ತೆರಳಿದ್ದಾರೆ. ಇದೀಗ ಸಂಗೀತಲೋಕ ಚಿತ್ರರಂಗದಲ್ಲಿ ಅವರ ಸಾಧನೆಗಾಗಿ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತರತ್ನ ನೀಡಿ ಪುರಸ್ಕರಿಸಬೇಕೆಂಬ ಕೂಗು ಶುರುವಾಗಿದೆ.
5 ದಶಕಗಳ ಕಾಲ ಸಂಗೀತ ಲೋಕದಲ್ಲಿ ತಮ್ಮ ಕಂಠದ ಮೂಲಕ ಮ್ಯಾಜಿಕ್ ಮಾಡಿರುವ ಎಸ್ ಪಿಬಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಈ ಸಂಬಂಧ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ಎಸ್ ಪಿಬಿ ಅವರಿಗೆ ‘ಭಾರತ ರತ್ನ’ ಘೋಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಖ್ಯಾತ ಗಾಯಕರಾದ ಲತಾ ಮಂಗೇಶ್ಕರ್, ಭೂಪೇನ್ ಹಜರೀಕಾ, ಎಂಎಸ್ ಸುಬ್ಬುಲಕ್ಷ್ಮಿ, ಬಿಸ್ಮಿಲ್ಲಾ ಖಾನ್, ಭೀಮ್‌ಸೇನ್ ಜೋಶಿ ಅವರಿಗೆ ‘ಭಾರತ ರತ್ನ’ ನೀಡಲಾಗಿದೆ. ಅದರಂತೆ ಈಗ “ “ಸಂಗೀತ ಮಾಂತ್ರಿಕ” ಎಸ್ ಪಿ ಬಿ ಅವರಿಗೆ “ಭಾರತ ರತ್ನ” ನೀಡಬೇಕೆಂದು ಜಗನ್ ಮೋಹನ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.









