ಕೋಟ್ಯಾಂಟರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಲೇ ಇಲ್ಲ.. 40 ಸಾವಿರಕ್ಕೂ ಹೆಚ್ಚು ಹಾಡುಗಳ ಹಾಡಿದ್ದ ಗಾನ ಸರದಾರನ ಧ್ವನಿ ಮೌನವಾಗಿದೆ.
ಗಾನಕೋಗಿಲೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಂಗೀತ ಲೋಕಕ್ಕೆ ಮಾತ್ರವಲ್ಲ, ಚಿತ್ರರಂಗಕ್ಕೂ ಬಹುದೊಡ್ಡ ನಷ್ಟವಾಗಿದೆ. ಬಹುಭಾಷೆಗಳಿಗೆ ಕಂಠ ದಾನ ಮಾಡಿದ್ದ ಗಾನಕೋಗಿಲೆ ಎಸ್ ಪಿ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ..
ಎಸ್ ಪಿ ಬಿ ಅವರಿಗೆ ಹೆಚ್ಚು ಅಭಿಮಾನಿಗಳು ಕನ್ನಡದವರೇ. ಕರ್ನಾಟಕದ ಮನೆ ಮನೆಯಲ್ಲಿಯೂ ಎಸ್ ಪಿ ಬಿ ಅಭಿಮಾನಿಗಳು ಇರುತ್ತಾರೆ ಎಂದರೂ ತಪ್ಪಾಗಲಾರದು. ಖಾಸಗಿ ಕಾರ್ಯಕ್ರಮಲ್ಲಿ ಎಸ್ ಪಿ ಅವರು ಒಮ್ಮೆ ಕನ್ನಡ ಅಭಿಮಾನಿಗಳ ಪ್ರೀತಿಯನ್ನೂ ಸ್ಮರಿಸಿದ್ದರು.
ಎಸ್ ಪಿಬಿ ಅವರು ಸಂಗೀತ ಸಾಮ್ರಾಜ್ಯವನ್ನ ಆಳಿದ ಸಾಮ್ರಾಟ. ಹಾಗೆಯೇ ಅತ್ಯದ್ಭುತ ನಟರೂ ಹೌದು. ಎಸ್ ಪಿಬಿ ಅವರು ಬಹುಭಾಷೆಗಳಲ್ಲಿ ನಟಿಸಿದ್ರೂ, ಕನ್ನಡದ ಚಿತ್ರರಂಗದಲ್ಲಿ ಕರುನಾಡಿಗರಿಂದ ವಿಷೇಶ ಪ್ರೀತಿ ಪಡೆದ ಕಲಾವಿಧ, ಸಂಗೀತ ಸಾಮ್ರಾಟ ಎಸ್ ಪಿಬಿ ಕರುನಾಡ ಜನರ “ಮನದರಸ”.
ಸ್ಯಾಂಡಲ್ ವುಡ್ ಸಿನಿ ಜರ್ನಿ :
ಎಸ್ ಪಿ ಬಿ ಅವರು 1892 ರಲ್ಲಿ ಬಾಳೊಂದು ಚದುರಂಗ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ರು. 1983ರಲ್ಲಿ ತಿರುಗು ಬಾಣ, 1993ರಲ್ಲಿ ಮುದ್ದಿನ ಮಾವ, 1998ರಲ್ಲಿ ಸಂದರ್ಭ, ಮಾಂಗಲ್ಯಂ ತಂತುನಾನೇನಾ, 1999ರಲ್ಲಿ ಮಾಯ, 20003ರಲ್ಲಿ ಮಹಾ ಎಡಬಿಡಂಗಿ, 2007ರಲ್ಲಿ ಕಲ್ಯಾಣೋತ್ಸವ, , ಹೆತ್ತರೇ ಹೆಣ್ಣನ್ನೇ ಹೆರಬೇಕು ಹೀಗೆ ಹಲವಾರು ಸಿನೆಮಾಗಳಲ್ಲಿ ನಟಿಸಿ ಅಭಿಮಾನಿಗಳ “ಅಪರಂಜಿ” ಆಗಿದ್ದವರು ಕಲಾ ನಿಪುಣ , ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ..
ಮರೆಯದ ಮಾಣಿಕ್ಯ, ಸಂಗೀತ ಮಾಂತ್ರಿಕನನ್ನ ಕಳೆದುಕೊಂಡು ಇಂದು ಕರ್ನಾಟಕ ಮಾತ್ರವಲ್ಲ ದೇಶವೇ ಬಡವಾಗಿದೆ. ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕೋಟ್ಯಾಂಟರ ಅಭಿಮಾನಿಗಳನ್ನು ಅಗಲಿ ಬಾರದೂರಿಗೆ ಪಯಣಿಸಿದ ಬಾಲಸುಬ್ರಹ್ಮಣ್ಯಂ ಅವರು ಸದಾ ಅಮರ.









