ಎಸ್ ಪಿ ಬಾಲಸುಬ್ರಹ್ಮಣ್ಯಂ ನೆನೆದು ಕಣ್ಣೀರು ಹಾಕಿದ ಗಾನ ಕೋಗಿಲೆ ಎಸ್ ಜಾನಕಿ
ಮೈಸೂರು, ಸೆಪ್ಟೆಂಬರ್27: ಸ್ವರ ಮಾಂತ್ರಿಕ ಎಸ್‌ಪಿಬಿ ಅವರ ಅಗಲಿಕೆಗೆ ಗಾನ ಕೋಗಿಲೆ ಎಸ್ ಜಾನಕಿ ಭಾವುಕರಾಗಿದ್ದಾರೆ. ಎಸ್‌ಪಿಬಿ ಅವರು ಯಾವುದೋ ಸಂಗೀತ ಸ್ಪರ್ಧೆಯಲ್ಲಿ ಹಾಡುತ್ತಿದ್ದಾಗ ಅವರ ಕಂಠದಲ್ಲಿ ಮೊದಲ ಸಲ ದೈವಿಕತೆ ಕಂಡವರು ಅವರು. ಆಮೇಲೆ ಎಸ್‌ಪಿಬಿ ಬಗ್ಗೆ ವಿವರ ಸಂಗ್ರಹಿಸಿ, ಅವರಿಗೆ ಅವಕಾಶ ಸಿಗುವಂತೆ ನೋಡಿ ಕೊಂಡಿದ್ದರು ಎಸ್ ಜಾನಕಿ. ಎಸ್‌ಪಿಬಿ ಅವರ ಬೆಳವಣಿಗೆ ಕಂಡು ಹಿಗ್ಗಿದ ಮಾತೃಜೀವ ಜಾನಕಿ ಇವತ್ತು ಆ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.
ಮೊದಲು ಸಲ ಬಾಲು ಅನ್ನು ನೋಡಿದಾಗ ಆತ ಸಂಗೀತ ಲೋಕದ ಆಸ್ತಿ ಎಂದು ಗೊತ್ತಾಗಿತ್ತು. ನಾನು ಬಾಲು ಸಾಕಷ್ಟು ಗೀತೆಗಳನ್ನು ಜೊತೆಯಾಗಿ ಹಾಡಿದ್ದೇವೆ. ಚಿಕ್ಕ ಮಕ್ಕಳಂತೆ ಆಟವಾಡುತ್ತಾ ವೃತ್ತಿ ಜೀವನ ಮಾಡಿದ್ದೇವೆ. ಸಂಗೀತ ಕ್ಷೇತ್ರದಲ್ಲಿ ಬಾಲು ನನಗೆ ಒಳ್ಳೆಯ ಸ್ನೇಹಿತ. ನನ್ನ ಹಾಗೂ ಬಾಲುವಿನ ಕೊನೆ ಸಂಗೀತ ಕಚೇರಿ ಮೈಸೂರಿನಲ್ಲಿ ನಡೆಯಿತು. ಮೈಸೂರಿಗೆ ಬಂದಾಗ ಆತ ನನ್ನ ಜೊತೆ ಮಾತನಾಡಿ ಹೋಗಿದ್ದ. ಅದುವೇ ಬಾಲು ಅನ್ನು ನೋಡಿದ ಕೊನೆ ಕ್ಷಣ ಎಂದು ಗಾನಕೋಗಿಲೆ ಕಣ್ಣೀರು ಮಿಡಿದಿದೆ.
https://twitter.com/SaakshaTv/status/1310238257716764672?s=19








