SP balasubramaniam
ಸಂಗೀತ, ನೃತ್ಯ ಶಾಲೆಗೆ ಎಸ್ ಪಿಬಿ ಹೆಸರು : ಆಂಧ್ರ ಸರ್ಕಾರದಿಂದ ಮಹತ್ವದ ನಿರ್ಧಾರ..!
ಭಾರತೀಯ ಸಂಗೀತ ಲೋಕದ ಲೆಜೆಂಡ್ ಸ್ವರ ಮಾಂತ್ರಿಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನೆಲ್ಲ ಅಗಲಿ ಸುಮಾರು 2 ತಿಂಗಳುಗಳ ಕಳೆದಿವೆ. ಇದೀಗ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರಕ್ಕೆ ಎಸ್ಪಿಬಿ ಅವರ ಕೊಡುಗೆಯನ್ನು ಸ್ಮರಿಸಿ ಗೌರವಾರ್ಥ ಸಂಗೀತ, ನೃತ್ಯ ಶಾಲೆಗೆ ಎಸ್ ಪಿಬಿ ಅವರ ಹೆಸರಿಟ್ಟಿದೆ. ಹೌದು ನೆಲ್ಲೂರಿನಲ್ಲಿರುವ ಸರ್ಕಾರಿ ಸಂಗೀತ ಮತ್ತು ನೃತ್ಯ ಶಾಲೆಗೆ ‘ಡಾ ಎಸ್ ಪಿ ಬಾಲಸುಬ್ರಹ್ಮಣ್ಯಂ ಸಂಗೀತ ಮತ್ತು ನೃತ್ಯ ಶಾಲೆ’ ಎಂದು ಮರುನಾಮಕರಣ ಮಾಡಲಾಗಿದೆ. 
ಮಕ್ಕಳಿಗಾಗಿ ಲಿಲ್ ಒನ್ ಎಂಬ ವಿಶೇಷ ಕಲಿಕೆಯ ಆಪ್
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಸೆಪ್ಟೆಂಬರ್ 25 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಕೊರೊನಾ ಸೋಂಕು ತಗುಲಿದ ಪರಿಣಾಮ ಆಸ್ಪತ್ರೆಯಲ್ಲಿ ದಾಖಲಾಗಿ ಸುಮಾರು 2 ತಿಂಗಳ ವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಪಿಬಿ ಅವರು ಗುಣಮುಖರಾಗಬೇಕೆಂದು ಕೋಟ್ಯಾನು ಕೋಟಿ ಅಭಿಮಾನಿಗಳು ಎಷ್ಟೇ ಪ್ರಾರ್ಥನೆಗಳನ್ನ ಸಲ್ಲಿಸಿದ್ರು ಅವರ ಪ್ರಾರ್ಥನೆ ಫಲಿಸಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಸೆ. 25ರಂದು ಬಾರದ ಲೋಕಕ್ಕೆ ಪಯಣ ಬೆಳಿಸಿದ್ರು. ಇನ್ನೂ ಅಗಮ್ಯ ಗಾನ ಕೋಗಿಲೆ ಎಸ್ ಪಿ ಅವರಿಗೆ ಗೌರವ ಸೂಚಿಸಿವ ಸಲುವಾಗಿ ಆಂಧ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 
ಇನ್ನೂ ಈ ವಿಚಾರವನ್ನ ಸಚಿವ ಮೆಕಪತಿ ಗೌತಮ್ ರೆಡ್ಡಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. “ದಿಗ್ಗಜ ಗಾಯಕ ಎಸ್.ಪಿ.ಬಾಲು ಅವರನ್ನು ಗುರುತಿಸಿ, ನೆಲ್ಲೂರಿನಲ್ಲಿರುವ ಸರ್ಕಾರಿ ನೃತ್ಯ ಮತ್ತು ಸಂಗೀತ ಶಾಲೆಯನ್ನು ‘ಡಾ. ಎಸ್ ಪಿ ಬಾಲಸುಬ್ರಮಣ್ಯಂ ಸರ್ಕಾರಿ ನೃತ್ಯ ಮತ್ತು ಸಂಗೀತ ಶಾಲೆ’ ಎಂದು ಹೆಸರು ಬದಲಾಯಿಸಲಾಗಿದೆ” ಎಂದು ತಿಳಿಸಿದ್ದಾರೆ. ಆಂಧ್ರ ಸರ್ಕಾರದ ಮಹತ್ಕಾರ್ಯಕ್ಕೆ ಎಲ್ಲೆಡೆಯಿಂದ ತೀವ್ರ ಮೆಚ್ಚುಗೆ ವ್ಯಕ್ತವಾಗ್ತಿದೆ. ಅಂದ್ಹಾಗೆ ಎಸ್ ಪಿ ಬಿ ಅವರ ಪುತ್ರ ಚರಣ್ ಅವರು ಈ ಕುರಿತಾಗಿ ಟ್ವೀಟ್ ಮಾಡಿದ್ದು, ಆಂಧ್ರ ಪ್ರದೇಶ ಸರ್ಕಾರ ಹಾಗೂ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
SP balasubramaniam
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








