ರಾಷ್ಟ್ರಗೀತೆ ಸಾಲುಗಳನ್ನೇ ಮರೆತ ಎಸ್ ಪಿ ಸಂಸದ
ನವದೆಹಲಿ : ಸಮಾಜವಾದಿ ಪಾರ್ಟಿಯ ಸಂಸದ ಎಸ್ ಟಿ ಹಸನ್ ಅವರು ರಾಷ್ಟ್ರಗೀತೆಯ ಸಾಲುಗಳಲ್ಲೇ ಮರೆತು ಮುಜುಗರಕ್ಕೆ ಈಡಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ನಿನ್ನೆ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣದ ನಡೆಸಿದ ಉತ್ಸಾಹದಲ್ಲಿ ಸಂಸದ ಹಸನ್ ಅವರ ಜೊತೆಗಿದ್ದ ವ್ಯಕ್ತಿಯೋರ್ವ, ರಾಷ್ಟ್ರಗೀತೆ ಹಾಡಲು ಶುರುಮಾಡಿದ್ದಾರೆ.
ಈ ವೇಳೆ ಸಂಸದರೂ ರಾಷ್ಟ್ರಗೀತೆ ಹಾಡಿದ್ದು, ಜನಗಣ ಮನ ಅಧಿನಾಯಕ ಜಯ ಹೇ, ಭಾರತ್ ಭಾಗ್ಯವಿಧಾತ, ಪಂಜಾಬ್ ಸಿಂಧು ಗುಜರಾತ್ ಮರಾಠ_ ಎಂಬಲ್ಲಿಯವರೆಗೆ ಹಾಡಿದ ವ್ಯಕ್ತಿ ಮುಂದಿನ ಸಾಲುಗಳನ್ನು ಮರೆತು ಹೋಗಿದ್ದಾರೆ.
ಈ ವೇಳೆ ಅವರ ಜೊತೆಗಿದ್ದ ಸಂಸದರು ಕೂಡ ಮುಂದಿನ ಸಾಲು ನೆನಪಾಗದೇ ಕೊನೆಯೆ ಜಯ ಹೇ, ಜಯ ಹೇ ಎಂದು ಅಲ್ಲಿಗೇ ರಾಷ್ಟ್ರಗೀತೆಯನ್ನು ಮುಗಿಸಿದ್ದಾರೆ.
ಇನ್ನು ಈ ವಿಡಿಯೋವನ್ನು ಬಿಜೆಪಿ ನಾಯಕ ಸಂಬಿತ್ ಪಾತ್ರಾ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.