ಈ ದಿನ ಚಂದ್ರನಿಗೆ ಅಪ್ಪಳಿಸಲಿದೆ SpaceX ರಾಕೆಟ್
ಸುಮಾರು 7 ವರ್ಷಗಳ ಹಿಂದೆ ಉಡಾವಣೆಯಾದ SpaceX ರಾಕೆಟ್ ನಿಯಂತ್ರಣ ಕಳೆದುಕೊಂಡಿರುವ ಸ್ಪೇಸ್ ಎಕ್ಸ್ ರಾಕೆಟ್ ಭಾರತದ ಚಂದ್ರಯಾನ ಮತ್ತು ನಾಸಾದ ಚಂದ್ರನ ವಿಚಕ್ಷಣ ಆರ್ಬಿಟರ್ ಅನ್ನು ಅಪಾಯಕ್ಕೆ ಸಿಲುಕಿಸಲಿದೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸ್ಪೇಸ್‍ಎಕ್ಸ್ ರಾಕೆಟ್ ಮಾರ್ಚ್ ತಿಂಗಳಿನಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಫೆಬ್ರವರಿ 2015 ರಲ್ಲಿ ಅಂತರಗ್ರಹ ಕಾರ್ಯಾಚರಣೆಯ ಭಾಗವಾಗಿ ಉಡಾವಣೆಯಾದ ಫಾಲ್ಕನ್ 9 ಬೂಸ್ಟರ್ ರಾಕೆಟ್ ಇಂಧನ ಖಾಲಿಯಾಗಿ ಕಕ್ಷೆಯಲ್ಲಿ ಅಸ್ತವ್ಯಸ್ತವಾಗಿ ಸುತ್ತುತ್ತಿದೆ.
ಈಗ ನಾಲ್ಕು ಟನ್ ತೂಕದ ಸೆಕೆಂಡ್‍ಗೆ 2.58 ಕಿ.ಮೀ ವೇಗದಲ್ಲಿ ಸಂಚರಿಸುವ ರಾಕೆಟ್ ಚಂದ್ರನನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.
ಫಾಲ್ಕನ್ 9 ರ ಎರಡನೇ ಹಂತದ ಒಣ ದ್ರವ್ಯರಾಶಿಯು ಸುಮಾರು 4 ಮೆಟ್ರಿಕ್ ಟನ್ ಗಳಷ್ಟಿರುತ್ತದೆ ಮತ್ತು ಇದು ಸುಮಾರು 2.58 km/s ವೇಗದಲ್ಲಿ ಚಂದ್ರನ ಮೇಲೆ ಪ್ರಭಾವ ಬೀರುತ್ತದೆ.
ಈ ರಾಕೆಟ್ ಫೆಬ್ರವರಿ 2015 ರಿಂದ ಸ್ವಲ್ಪ ಅಸ್ತವ್ಯಸ್ತವಾಗಿರುವ ಕಕ್ಷೆಯನ್ನು ಅನುಸರಿಸುತ್ತಿದೆ ಎಂದು ಹವಾಮಾನ ಶಾಸ್ತ್ರಜ್ಞ ಎರಿಕ್ ಬರ್ಗರ್ ಆರ್ಸ್ ತಿಳಿಸಿದ್ದಾರೆ..
ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ನಿಂದ ಉಡಾವಣೆಯಾದ ಸ್ಟಾರ್‌ಲಿಂಕ್ ಉಪಗ್ರಹಗಳು ಟಿಯಾಂಗಾಂಗ್ ಎಂಬ ಚೀನೀ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ನಂತರ ಇದು ಬಂದಪ್ಪಳಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಬಲ್ಗೇರಿಯಾ… ಯೂರೋಪ್ ಅತ್ಯಂತ ಪ್ರಾಚೀನ ಹಾಗೂ ಸುಂದರ ದೇಶ…!!
ಖಗೋಳವಿಜ್ಞಾನಿ ಬಿಲ್ ಗ್ರೇ ಈ ರಾಕೆಟ್ ಪಥವನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ರಾಕೆಟ್ ವೀಕ್ಷಿಸುತ್ತಿರುವ ಖಗೋಳಶಾಸ್ತ್ರಜ್ಞರು ಡೇಟಾವನ್ನು ಸಂಗ್ರಹಿಸುತ್ತಿದ್ದು, ಯಾವಾಗ ರಾಕೆಟ್ ಚಂದ್ರನಿಗೆ ಅಪ್ಪಳಿಸಬಹುದೆಂದು ಲೆಕ್ಕಾಚಾರ ಮಾಡುತ್ತಿದ್ದಾರೆ.
spacex rocket will crash into moon very soon
ಮಾರ್ಚ್ 4 ರಂದು ಈ ರಾಕೆಟ್ ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿದ್ದರೂ ಚಂದ್ರನ ಯಾವ ಭಾಗಕ್ಕೆ ಅಪ್ಪಳಿಸಬಹುದು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದು ಬಹಳ ಕಠಿಣ ವಿಚಾರ ಎಂದು ತಜ್ಞರು ತಿಳಿಸಿದ್ದಾರೆ.
ಅಲ್ಲದೇ ಯಾವುದೇ ಉದ್ದೇಶವಿಲ್ಲದೇ ಬಾಹ್ಯಾಕಾಶದ ಕಸವೊಂದು ಚಂದ್ರನ ಮೇಲೆ ಅಪ್ಪಳಿಸುತ್ತಿರುವುದು ಇದೇ ಮೊದಲು. ಅಪ್ಪಳಿಸಿದ ನಂತರ ಸೃಷ್ಟಿಯಾಗುವ ಕುಳಿಯ ಬಗ್ಗೆ ತಿಳಿಯುವ ವೈಜ್ಞಾನಿಕ ಕುತೂಹಲ ಹೆಚ್ಚಾಗಿದೆ ಎಂದು ಬಿಲ್ ಗ್ರೇ ಹೇಳಿದ್ದಾರೆ.








