ADVERTISEMENT
Tuesday, February 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಗಗನಯಾತ್ರಿಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸಿದ ಸ್ಪೇಸ್‌ಎಕ್ಸ್…

admin by admin
May 31, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ವಾಷಿಂಗ್ಟನ್, ಮೇ 31 : ಅಮೆರಿಕದ ಸ್ಪೇಸ್‌ಎಕ್ಸ್‌ ರಾಕೆಟ್ ಕಂಪನಿ ಇಬ್ಬರು ಗಗನಯಾತ್ರಿಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಶನಿವಾರ ರಾತ್ರಿ ಅಮೆರಿಕದ ಎಲಾನ್ ಮಸ್ಕ್ ಅವರ ಮಾಲೀಕತ್ವದ ಖಾಸಗಿ ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ರಾಬರ್ಟ್ ಬೆಹೆನ್ಕೆನ್ ಮತ್ತು ಡೌಗ್ಲಾಸ್ ಹರ್ಲಿ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್‌ ಫಾಲ್ಕಾನ್ 9 ರಾಕೆಟ್ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ರಾತ್ರಿ 12.15 ಗಂಟೆಗೆ ಉಡಾವಣೆಯಾಗಿದೆ.

ಅಮೆರಿಕ ನೆಲದಿಂದ 2011ರ ನಂತರ ಬಾಹ್ಯಾಕಾಶ ಯಾತ್ರೆ ಕೈಗೊಂಡಿರಲಿಲ್ಲ. 9 ವರ್ಷಗಳ ಬಳಿಕ ಇದು ಮೊದಲ ಯಾನವಾಗಿದ್ದು, 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಲಾನ್ ಮಸ್ಕ್ ಅವರ ಮಾಲೀಕತ್ವದ ಖಾಸಗಿ ರಾಕೆಟ್ ಕಂಪನಿ ಮಾನವ ಸಹಿತ ಗಗನಯಾನ ಕೈಗೊಂಡಿರುವ ಕಾರಣ ಇದು ವಿಶ್ವದ ಗಮನ ಸೆಳೆದಿತ್ತು. ಅಮೆರಿಕ ‌ಕಳೆದ 9 ವರ್ಷಗಳಿಂದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ರಷ್ಯಾ ಮೇಲೆ ಅವಲಂಬಿತವಾಗಿತ್ತು ಮತ್ತು ರಷ್ಯಾ ಪ್ರತಿಯಾನಕ್ಕೆ 650 ಕೋಟಿ ರೂ ವಿಧಿಸುತ್ತಿತ್ತು.
ಗಗನಯಾತ್ರಿಗಳು 19 ಗಂಟೆಯ ಪ್ರಯಾಣದ ಬಳಿಕ ಅಮತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದ್ದಾರೆ. ಒಟ್ಟಾರೆ 27 ಪರೀಕ್ಷೆಗಳನ್ನು ನಡೆಸಿದ್ದ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್‌ಗಾಗಿ ಕೊನೆಯ ಪರೀಕ್ಷೆಗಳಲ್ಲಿ ಒಂದಾದ ಮಾರ್ಕ್ 3 ಪ್ಯಾರಾಚೂಟ್ ಸಿಸ್ಟಮ್ ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಕಂಪನಿಯು ಮೇ 1 ರಂದು ಘೋಷಿಸಿತ್ತು.

Related posts

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

February 17, 2026
KSRTCಯಲ್ಲಿ ಲಗೇಜ್ ದರ ಭಾರೀ ಏರಿಕೆ

KSRTCಯಲ್ಲಿ ಲಗೇಜ್ ದರ ಭಾರೀ ಏರಿಕೆ

February 17, 2026

ಸ್ಪೇಸ್‌ ಎಕ್ಸ್ ಡೆಮೋ-2 ಮಿಶನ್ ಎನ್ನುವುದು ನಾಸಾದ ವ್ಯಾವಹಾರಿಕ ಮಾನವ ಸಹಿತ ಗಗನಯಾನ ಯೋಜನೆಯಾಗಿದ್ದು, ಬುಧವಾರ ಮೊದಲ ಬಾರಿಗೆ ಇಬ್ಬರು ಗಗನಯಾತ್ರಿಗಳನ್ನು ಹೊಂದಿರುವ ರಾಕೆಟ್ ನ್ನು ನಾಸಾ ಮತ್ತು ಸ್ಪೇಸ್ ಎಕ್ಸ್ ಬಾಹ್ಯಾಕಾಶಕ್ಕೆ ಹಾರಿಸಿತ್ತು.‌ ಆದರೆ ಪ್ರತಿಕೂಲ ವಾತಾವರಣದ ಹಿನ್ನಲೆಯಲ್ಲಿ ರಾಕೆಟ್ ಅನ್ನು ಹಿಂದಕ್ಕೆ ‌ಕರೆಸಿಕೊಂಡಿತ್ತು.

ಖಾಸಗಿ ಬಾಹ್ಯಾಕಾಶ ನೌಕೆಗಳನ್ನು ಅಭಿವೃದ್ಧಿಪಡಿಸಿ ಅಮೆರಿಕದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿರುವ ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮವು ಬರಾಕ್ ಒಬಾಮರ ಅಡಿಯಲ್ಲಿ ಪ್ರಾರಂಭವಾಗಿತ್ತು. ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಕಳೆದ 2011ರಲ್ಲಿ ಬಾಹ್ಯಾಕಾಶ ನೌಕೆಯ ನಿವೃತ್ತಿ ಆದಾಗಿನಿಂದಲೂ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ರವಾನಿಸಲು, ರಷ್ಯಾದ ರಾಕೆಟ್‌ಗಳನ್ನು ಬಳಸಿಕೊಳ್ಳುತ್ತಿದೆ. ಪ್ರತಿಯಾನಕ್ಕೆ ರಷ್ಯಾ 650 ಕೋಟಿ ರೂ ವಿಧಿಸುತ್ತಿದ್ದರೆ, ಸ್ಪೇಸ್‌ಎಕ್ಸ್ 415 ಕೋಟಿ ರೂ. ಪಡೆಯಲಿದೆ

Tags: SpaceX
ShareTweetSendShare
Join us on:

Related Posts

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

by Shwetha
February 17, 2026
0

ಬೆಂಗಳೂರು: ವಂದೇ ಮಾತರಂ ಹಾಡಿಗೆ ರಾಷ್ಟ್ರಗೀತೆಯಾದ ಜನ ಗಣ ಮನಕ್ಕೆ ಸರಿಸಮಾನವಾದ ಸ್ಥಾನಮಾನ ನೀಡಲು ಹೊರಟಿರುವ ಕೇಂದ್ರ ಸರಕಾರದ ಕ್ರಮವು ರಾಷ್ಟ್ರಗೀತೆಯ ಘನತೆ ಹಾಗೂ ಸಂವಿಧಾನಾತ್ಮಕ ಸ್ಥಾನಮಾನವನ್ನೇ...

KSRTCಯಲ್ಲಿ ಲಗೇಜ್ ದರ ಭಾರೀ ಏರಿಕೆ

KSRTCಯಲ್ಲಿ ಲಗೇಜ್ ದರ ಭಾರೀ ಏರಿಕೆ

by Shwetha
February 17, 2026
0

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳಲ್ಲಿ ಸಾಗಿಸುವ ಲಗೇಜ್‌ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಫೆಬ್ರವರಿ 16ರಿಂದಲೇ ಜಾರಿಗೆ ಬಂದಿದೆ. ಈ...

ಭಾರತದ ಎದುರು ಸೋಲು… ಟಿ20 ವಿಶ್ವಕಪ್‌ನಲ್ಲಿ ಪಾಕ್ ಗೆ ಸಂಕಷ್ಟ

ಭಾರತದ ಎದುರು ಸೋಲು… ಟಿ20 ವಿಶ್ವಕಪ್‌ನಲ್ಲಿ ಪಾಕ್ ಗೆ ಸಂಕಷ್ಟ

by Shwetha
February 17, 2026
0

ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಕಂಡ ಸೋಲು ಪಾಕಿಸ್ತಾನ ತಂಡವನ್ನು ಕಠಿಣ ಪರಿಸ್ಥಿತಿಗೆ ನೂಕಿದೆ. ಗ್ರೂಪ್ ಎ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಮುಂದಿನ ಪಂದ್ಯವನ್ನು...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (17-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 17, 2026
0

ದಿನ ಭವಿಷ್ಯ: 17-02-2026 ಮೇಷ ರಾಶಿ ಇಂದು ನಿಮ್ಮ ರಾಶ್ಯಾಧಿಪತಿ ಕುಜನ ದಿನವಾದ್ದರಿಂದ ನಿಮಗೆ ಉತ್ಸಾಹ ಹೆಚ್ಚಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ. ಕೋರ್ಟು ಕಚೇರಿ ಕೆಲಸಗಳಲ್ಲಿ...

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

by admin
February 16, 2026
0

• ಆಕಾಶ್ ಅಂಬಾನಿ ಅವರು ಜಿಯೋದ ಎಐ ಪರಿಸರ ವ್ಯವಸ್ಥೆಯ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು • ಜಿಯೋ ಇಂಟೆಲಿಜೆನ್ಸ್ ನಿಂದ ಜಿಯೋ ಆರೋಗ್ಯ ಎಐ ವರೆಗಿನ ಅನೇಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram