ನೂರು ವರ್ಷದ ಬಳಿಕ ಹಿಸ್ಟರಿ ರಿಪೀಟ್ | ‘ಸ್ಪ್ಯಾನಿಷ್ ಫ್ಲೂ’ ಟು ಕೊರೊನಾ 2.0
ಬ್ರಿಟನ್ ಹೆಸರು ಕೇಳಿದ್ರೆ ಸಾಕು ಸದ್ಯ ಜಗತ್ತು ನಡುಗಿ ಹೋಗುತ್ತಿದೆ. ಅಯ್ಯೋ ಇದರ ಸಹವಾಸವೇ ಬೇಡ ಅಂತ ಎಲ್ಲಾ ದೇಶಗಳು ಬ್ರಿಟನ್ ವಿಮಾನಗಳಿಗೆ ನಿಬರ್ಂಧ ಏರಿವೆ. ಬ್ರಿಟನ್ನಿನ ಗಡಿಗಳನ್ನು ನೆರೆಯ ರಾಷ್ಟ್ರಗಳು ಮುಚ್ಚಿವೆ. ಇದಕ್ಕೆ ಕಾರಣ ಬ್ರಿಟನ್ ನಲ್ಲಿ ಕೋವಿಡ್ ವೈರಸ್ ನ ಹೊಸ ತಳಿ ಕಾಣಿಸಿಕೊಂಡಿರುವುದು.
ಬ್ರಿಟನ್ ನ ಈ ಸ್ಥಿತಿ.. ಸುಮಾರು ನೂರು ವರ್ಷಗಳಿಂದೆ ಬ್ರಿಟನ್ ನಲ್ಲಿ ಕಾಣಿಸಿಕೊಂಡಿದ್ದ ‘ಸ್ಪ್ಯಾನಿಷ್ ಫ್ಲೂ’ ಅನ್ನು ನೆನಪಿಸುತ್ತಿದೆ. ಜಗತ್ತಿನಾದ್ಯಂತ 3 ಲಕ್ಷ ಜನರನ್ನು ಬಲಿ ತೆಗೆದುಕೊಂಡ ಈ ವೈರಸ್ ಬ್ರಿಟನ್ ನಲ್ಲಿ ಸಾಂಕ್ರಾಮಿಕ ರೋಗವಾಗಿ ಪರಿವರ್ತನೆಗೊಂಡಿದ್ದು ಅಂತ ಹೇಳಲಾಗುತ್ತೆ.
ಬ್ರಿಟನ್ ನ್ ಗೆ ಒಕ್ಕರಿಸಿತು ಆಫ್ರಿಕಾ ವೈರಸ್ : ಇದು 3ನೇ ತಳಿ ಕೊರೊನಾ ವೈರಸ್..!
ಅದು ಮೊದಲ ಮಹಾಯುದ್ಧ ಬಹುತೇಕ ಮುಗಿದ ಕಾಲ. ಯೂರೋಪಿನಿಂದ ಸೈನಿಕರು ತಮ್ಮ ದೇಶಗಳಿಗೆ ತೆರಳುತ್ತಿದ್ದರು. ಲಂಡನ್ ನಿಂದ 190 ಮೈಲಿ ದೂರದಲ್ಲಿರುವ ಪೆÇೀರ್ಟ್ ಸಿಟಿ ಪ್ಲೈಮೌತ್ ನಿಂದ ಮಿಲಿಟರಿ ಹಡಗುಗಳ ಹೊರಟವು. 1918ರ ಸೆಪ್ಟೆಂಬರ್ ನಲ್ಲಿ, ಮೂರು ಹಡಗುಗಳು ಪಶ್ಚಿಮ ಆಫ್ರಿಕಾದ ಬೋಸ್ಟನ್, ಫ್ರಾನ್ಸ್ ಮತ್ತು ಫ್ರೀಟೌನ್ ಗೆ ಹೋದವು. ಇಲ್ಲಿಂದ್ದ ಹೋದ ಸೈನಿಕರು ತೀವ್ರ ಅನಾರೋಗ್ಯದಿಂದ ಮೃತಪಟ್ಟರು. ನಂತರ ಅದು ಇತರ ರಾಷ್ಟ್ರಗಳಿಗೂ ಹರಡಿತು.
ಪೊಲೀಸರಿಗೆ ಬುದ್ದಿ ಕಲಿಸಿದ ಹೈಕೋರ್ಟ್: ರಸ್ತೆ ಗುಡಿಸೋ ಶಿಕ್ಷೆ ಕೊಟ್ಟಿದ್ದೇಕೆ ಗೊತ್ತಾ..!
ಮೊದಲ ಮಹಾಯುದ್ಧ ಮುಗಿದ ನಂತರ 1918ರ ಮಾರ್ಚ್ ನಲ್ಲಿ ಅಮೆರಿಕದ ಕಾನ್ಸಾಸ್ ನಲ್ಲಿ ಸ್ಪ್ಯಾನಿಷ್ ಫ್ಲೂ ಜ್ವರದ ಮೊದಲ ಪ್ರಕರಣ ವರದಿಯಾಗಿತ್ತು. ಅಲ್ಲಿಂದ ಸೈನ್ಯ ಯುರೋಪಿಗೆ ಹೋದಾಗ ಸ್ಪ್ಯಾನಿಪ್ ಫ್ಲ್ಯೂ ಲಕ್ಷಣಗಳು ಅಲ್ಲಿ ಹೆಚ್ಚಾಗಿ ಕಂಡುಬಂದವು. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಸ್ಪೈನ್ ಬಹಿರಂಗಪಡಿಸಿದರಿಂದ ಇದನ್ನ ‘ಸ್ಪ್ಯಾನಿಷ್ ಫ್ಲೂ’ ಎಂದು ಕರೆಯಲಾಯಿತು. ಯುದ್ಧದ ನಂತರ, ಯೂರೋಪಿನ ಸೈನಿಕರು ಸ್ಪ್ಯಾನಿಷ್ ಫ್ಲೂ ಅನ್ನು ತಮ್ಮ ದೇಶಗಳಿಗೆ ಕೊಂಡೊಯ್ದರು. ನಂತರ ಅದು ಸಂಪೂರ್ಣ ರೂಪಾಂತರದೊಂದಿಗೆ ಆರ್ಭಟಿಸಿತ್ತು. ಇದನ್ನೇ ಎರಡನೇ ಅಲೆ ಅಂತ ಕರೆಯಲಾಯಿತು. 1918ರ ಮಾರ್ಚ್ ನಲ್ಲಿ, ಮೊದಲ ಪ್ರಕರಣವು ಅಮೇರಿಕಾದಲ್ಲಿ ದಾಖಲಾಗಿದ್ದು, 189 ಜನರು ಮರಣ ಹೊಂದಿದರು. ಆದರೆ.. ಸೆಪ್ಟೆಂಬರ್ ನಲ್ಲಿ ಯೂರೋಪಿನಿಂದ ಹಿಂದಿರುಗಿದ ಸೈನಿಕರ ಎರಡನೇ ಅಲೆಯು ಈ ಹತ್ಯಾಕಾಂಡವನ್ನು ಸೃಷ್ಟಿಸಿತು. ಅಕ್ಟೋಬರ್ ತಿಂಗಳೊಂದರಲ್ಲೇ ಅಮೆರಿಕದಲ್ಲಿ 1.95 ಲಕ್ಷ ಮಂದಿ ಮೃತಪಟ್ಟಿದ್ದರು.
ಭಾರತಕ್ಕೆ ಸ್ಪಾನಿಷ್ ಫ್ಲೂ ಬಂದಿದ್ದು ಹೇಗೆ..?
ಯುರೋಪಿನ ಸೈನಿಕರೊಂದಿಗೆ ಮೊದಲ ಹಡಗು ಜೂನ್ ನಲ್ಲಿ ಮುಂಬೈಗೆ ಆಗಮಿಸಿತ್ತು. ಅವರೊಂದಿಗೆ ಸ್ಪಾನಿಷ್ ಫ್ಲೂ ನಮ್ಮ ದೇಶವನ್ನು ಪ್ರವೇಶಿಸಿತು. ಅದೇ ವರ್ಷ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮುಂಬೈನಲ್ಲಿ ಈ ರೋಗವು ಕಾಣಿಸಿಕೊಳ್ತು. ಬ್ರಿಟನ್ ನಿಂದ ಬೋಸ್ಟನ್ ಗೆ ಹೋದ ಸೈನಿಕರಲ್ಲಿ ಕಾಣಿಸಿಕೊಂಡ ಲಕ್ಷಣಗಳೇ ನಮ್ಮ ದೇಶದಲ್ಲೂ ಕಾಣಿಸಿಕೊಳ್ತು. ಅಂದ್ರೆ ಬ್ರಿಟನ್ ನಲ್ಲಿ ಪರಿವರ್ತನೆಗೊಂಡ ವೈರಸ್ ನಮ್ಮ ದೇಶಕ್ಕೆ ವಕ್ಕರಿಸಿದಂತಾಯ್ತು. ನಂತರ ಅಕ್ಟೋಬರ್ ಮಧ್ಯಭಾಗದಲ್ಲಿ ಚೆನ್ನೈನಲ್ಲಿ ಈ ವೈರಸ್ ಅಬ್ಬರಿಸಿತು. ನವೆಂಬರ್ ನಲ್ಲಿ ಕೋಲ್ಕತ್ತಾವನ್ನು ನಡುಗಿಸಿತು. ಒಂದು ತಿಂಗಳೊಳಗೆ ದೇಶದಾದ್ಯಂತ ಅರ್ಧ ಕೋಟಿ ಮಂದಿಯನ್ನು ಈ ವೈರಸ್ ಬಲಿ ತೆಗೆದುಕೊಳ್ತು.
ಡೋಂಟ್ ವರಿ ಕೋವಿಡ್ ಅಷ್ಟು ಸ್ಟ್ರಾಂಗ್ ಅಲ್ಲ
ಹೌದು..! ಸ್ಪ್ಯಾನಿಷ್ ಫ್ಲೂ ಅಬ್ಬರಿಸಿದಂತೆ ಕೊರೊನಾ ಕೂಡ ಆರಂಭದಲ್ಲಿ ಆರ್ಭಟಿಸಿದೆ. ಆದರೆ ಕೋವಿಡ್ ಎರಡನೇ ಅಲೆಯಿಂದ ಯಾವುದೇ ದೊಡ್ಡ ಅಪಾಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








